ಭಾಗಶಃ ಅರಣ್ಯ ಭೂಮಿ ಗೊಂದಲ : ಕಂದಾಯ- ಅರಣ್ಯ- ಭೂಮಾಪನ ಇಲಾಖೆಗಳಿಂದ ಜಂಟಿ ಸರ್ವೇ, ಪ್ಲಾಟಿಂಗ್‌ಗೆ ಅಬ್ದುಲ್ ಗಫೂರ್ ಕಲ್ಮಡ್ಕ ಆಗ್ರಹ

ಸುಳ್ಯ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಭಾಗಶಃ ಅರಣ್ಯ(ಡೀಮ್ಡ್ ಫಾರೆಸ್ಟ್/ಅರಣ್ಯ ಗಡಿ) ಸಮಸ್ಯೆಯಿಂದಾಗಿ ನೂರಾರು ಕುಟುಂಬಗಳು ನಿವೇಶನ ಮತ್ತು ಹಕ್ಕುಪತ್ರ ಸಿಗದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಕಂದಾಯ, ಅರಣ್ಯ ಹಾಗೂ ಭೂಮಾಪನ ಇಲಾಖೆಗಳು ಒಟ್ಟಾಗಿ ಜಂಟಿ ಸರ್ವೇ ನಡೆಸಿ ಪ್ಲಾಟಿಂಗ್ ಮಾಡುವ ಕೆಲಸ ತುರ್ತಾಗಿ ಆಗಬೇಕೆಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಬ್ದುಲ್ ಗಫೂರ್ ಕಲ್ಮಡ್ಕ ಆಗ್ರಹಿಸಿದರು. ಸುಳ್ಯದ ಪತ್ರಿಕಾಭವನದಲ್ಲಿ ಸೆ.26ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ತಾಲೂಕಿನ ಕೊಲ್ಲಮೊಗ್ರು, ಕಲ್ಮಕಾರು ಸೇರಿದಂತೆ ಹಲವು ಗ್ರಾಮಗಳಲ್ಲಿ ನೆರೆ ಸಂತ್ರಸ್ತರಿಗೆ ಮತ್ತು ವಸತಿರಹಿತ ಬಡ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲು ಸರ್ಕಾರಿ ಜಮೀನು ಲಭ್ಯವಿದ್ದರೂ, ಅರಣ್ಯ ಇಲಾಖೆಯ ಅನಗತ್ಯ ತಕರಾರು ಮತ್ತು ಗೊಂದಲಗಳಿಂದಾಗಿ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

. . . . . . . . .

ಸರ್ಕಾರಿ ಗೋಮಾಳ ಜಾಗದಲ್ಲೂ ನಿವೇಶನ ಕಾಯ್ದಿರಿಸಲು ಅರಣ್ಯ ಇಲಾಖೆಯ ನಿರಾಕ್ಷೇಪಣಾ ಪತ್ರ (NOC) ಬೇಕೆಂದು ತಹಶೀಲ್ದಾರ್ ತಿಳಿಸುತ್ತಿದ್ದು, ಈ ಭಾಗಶಃ ಅರಣ್ಯ ಸಮಸ್ಯೆಯಿಂದ ಜನಸಾಮಾನ್ಯರು ಕಚೇರಿಗಳಿಗೆ ಅಲೆಯುವಂತಾಗಿದೆ. ಈ ಗೊಂದಲ ನಿವಾರಣೆಯಾಗಬೇಕಾದರೆ ಕಂದಾಯ, ಅರಣ್ಯ ಮತ್ತು ಭೂಮಾಪನ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ಜಂಟಿಯಾಗಿ ತೆರಳಿ ಪರಿಶೀಲಿಸಬೇಕು. ಅರಣ್ಯ ಮತ್ತು ಕಂದಾಯ ಗಡಿಗಳನ್ನು ಸ್ಪಷ್ಟವಾಗಿ ಗುರುತಿಸಿ, ನಿವೇಶನಕ್ಕೆ ಯೋಗ್ಯವಾದ ಜಮೀನನ್ನು ಜಂಟಿ ಸರ್ವೇ ಮೂಲಕ ಪ್ಲಾಟಿಂಗ್ ಮಾಡಿ, ಸ್ಥಳೀಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಈ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರಿಗೆ ಈಗಾಗಲೇ ಮನವಿ ಸಲ್ಲಿಸಿರುವುದಾಗಿ ಅವರು ತಿಳಿಸಿದರು.

. . . . . . .

ಸುದ್ದಿಗೋಷ್ಠಿಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭವಾನಿಶಂಕರ್ ಕಲ್ಮಡ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಕರುಣಾಕರ ಅಡ್ಪಂಗಾಯ, ಪ್ರಚಾರ ಸಮಿತಿ ಸದಸ್ಯ ರಫಿಕ್ ಐವತ್ತೊಕ್ಲು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading