“ಮಾರುಕಟ್ಟೆ ರೌಂಡ್ ಅಪ್” – ಸೋಮವಾರ(ಆ.03)ದಿಂದ ಶನಿವಾರ(ಆ.08)ದವರೆಗಿನ “ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ”ಯ ಸಮಗ್ರ ನೋಟ – ವಾರವಿಡೀ ಸ್ಥಿರವಾಗಿದ್ದ ಅಡಿಕೆ ದರ – ಕೊಬ್ಬರಿ, ರಬ್ಬರ್, ಕಾಳುಮೆಣಸು ದರದಲ್ಲಿ ಜಿಗಿತ..!!

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು ಪ್ರತಿದಿನವೂ ಕೂಡ “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪ್ರಮುಖ ಕೃಷಿ ಉತ್ಪನ್ನಗಳ ಆಯಾ ದಿನಗಳ ಮಾರುಕಟ್ಟೆ ಧಾರಣೆಯ ವಿವರಗಳನ್ನು ಪಡೆದುಕೊಂಡು ಪ್ರತಿದಿನವೂ ಕೂಡ ನಮ್ಮ “ಅಮರ ಸುಳ್ಯ ಸುದ್ದಿ ವಾರಪತ್ರಿಕೆ”ಯ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತಾ ಬರುತ್ತಿದ್ದೇವೆ. ಈ ವಾರ ಅಂದರೆ ಆಗಸ್ಟ್ 03 ಸೋಮವಾರದಿಂದ ಆಗಸ್ಟ್ 08 ಶನಿವಾರದವರೆಗೆ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಕಂಡುಬಂದ ಏರಿಳಿತಗಳೇನು..!? ಎನ್ನುವುದನ್ನು ಈ ವಾರದ “ಮಾರುಕಟ್ಟೆ ರೌಂಡ್ ಅಪ್ ವರದಿ”ಯ ಮೂಲಕ ವಿಸ್ತೃತವಾಗಿ ತಿಳಿದುಕೊಳ್ಳೋಣ ಬನ್ನಿ…

1) ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆ : ಅಡಿಕೆಯ ಎಲ್ಲಾ ವಿಭಾಗಗಳಲ್ಲೂ ಸಂಪೂರ್ಣ ಸ್ಥಿರತೆ..!
ಈ ವಾರದ ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆಯಲ್ಲಿ ಸಂಪೂರ್ಣ ಸ್ಥಿರತೆ ಕಂಡುಬಂದಿದ್ದು, ಅಡಿಕೆಯ ಮುಖ್ಯ ವಿಭಾಗಗಳಾದ ಹೊಸ ಅಡಿಕೆ, ಹಳೆ ಅಡಿಕೆ, ಡಬಲ್ ಚೋಲ್ ಹಾಗೂ ಉಪ ಉತ್ಪನ್ನಗಳಾದ ಫಟೋರಾ, ಉಳ್ಳಿ, ಕರಿಗೋಟು ಧಾರಣೆಗಳಲ್ಲಿ ವಾರಪೂರ್ತಿ ಸಂಪೂರ್ಣ ಸ್ಥಿರತೆ ಕಂಡುಬಂದಿತ್ತು.
ಹೊಸ ಅಡಿಕೆ : ಸೋಮವಾರದಂದು ಕನಿಷ್ಠ 390 ರಿಂದ ಗರಿಷ್ಠ 475 ರೂಪಾಯಿ ಇದ್ದ ಬೆಲೆ ಶನಿವಾರದಂದು ಕೂಡ ಯಾವುದೇ ಬದಲಾವಣೆಯಿಲ್ಲದೇ ಅದೇ ಬೆಲೆಯಲ್ಲಿ ಮುಂದುವರಿದಿತ್ತು.(ಸಂಪೂರ್ಣ ಸ್ಥಿರತೆ)
ಹಳೆ ಅಡಿಕೆ ಮತ್ತು ಡಬಲ್ ಚೋಲ್ : ಸೋಮವಾರದಂದು ಕನಿಷ್ಠ 390 ರಿಂದ ಗರಿಷ್ಠ 550 ರೂಪಾಯಿ ಇದ್ದ ಬೆಲೆ ಶನಿವಾರದಂದು ಕೂಡ ಯಾವುದೇ ಬದಲಾವಣೆಯಿಲ್ಲದೇ ಅದೇ ಬೆಲೆಯಲ್ಲಿ ಮುಂದುವರಿದಿತ್ತು.(ಸಂಪೂರ್ಣ ಸ್ಥಿರತೆ)
ಫಟೋರಾ : ಸೋಮವಾರದಂದು ಕನಿಷ್ಠ 320 ರಿಂದ ಗರಿಷ್ಠ 375 ರೂಪಾಯಿ ಇದ್ದ ಬೆಲೆ ಶನಿವಾರದಂದು ಕೂಡ ಯಾವುದೇ ಬದಲಾವಣೆಯಿಲ್ಲದೇ ಅದೇ ಬೆಲೆಯಲ್ಲಿ ಮುಂದುವರಿದಿತ್ತು.(ಸಂಪೂರ್ಣ ಸ್ಥಿರತೆ)
ಉಳ್ಳಿ : ಸೋಮವಾರದಂದು ಕನಿಷ್ಠ 250 ರಿಂದ ಗರಿಷ್ಠ 270 ರೂಪಾಯಿ ಇದ್ದ ಬೆಲೆ ಶನಿವಾರದಂದು ಕೂಡ ಯಾವುದೇ ಬದಲಾವಣೆಯಿಲ್ಲದೇ ಅದೇ ಬೆಲೆಯಲ್ಲಿ ಮುಂದುವರಿದಿತ್ತು.(ಸಂಪೂರ್ಣ ಸ್ಥಿರತೆ)
ಕರಿಗೋಟು : ಸೋಮವಾರದಂದು ಕನಿಷ್ಠ 225 ರಿಂದ ಗರಿಷ್ಠ 255 ರೂಪಾಯಿ ಇದ್ದ ಬೆಲೆ ಶನಿವಾರದಂದು ಕೂಡ ಯಾವುದೇ ಬದಲಾವಣೆಯಿಲ್ಲದೇ ಅದೇ ಬೆಲೆಯಲ್ಲಿ ಮುಂದುವರಿದಿತ್ತು.(ಸಂಪೂರ್ಣ ಸ್ಥಿರತೆ)

2) ಕ್ಯಾಂಪ್ಕೋ ಇತರೆ ಪ್ರಮುಖ ಕೃಷಿ ಉತ್ಪನ್ನಗಳ ಮಾರುಕಟ್ಟೆ : ಕಾಳುಮೆಣಸು ಹಾಗೂ ಕೊಬ್ಬರಿ ದರದಲ್ಲಿ ಏರಿಕೆ – ಕೊಕ್ಕೋ ಧಾರಣೆಯಲ್ಲಿ ಸಂಪೂರ್ಣ ಸ್ಥಿರತೆ..!
ಈ ವಾರದ ಇತರೆ ಪ್ರಮುಖ ಕೃಷಿ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಕಾಳುಮೆಣಸು ಹಾಗೂ ಕೊಬ್ಬರಿ ಧಾರಣೆಯಲ್ಲಿ ಏರಿಕೆ ಕಂಡುಬಂದಿದ್ದು, ಕೊಕ್ಕೋ ಧಾರಣೆಯಲ್ಲಿ ವಾರಪೂರ್ತಿ ಸಂಪೂರ್ಣ ಸ್ಥಿರತೆ ಕಂಡುಬಂದಿತ್ತು.
ಕಾಳುಮೆಣಸು : ಸೋಮವಾರದಂದು ಕನಿಷ್ಠ 585 ರಿಂದ ಗರಿಷ್ಠ 680 ರೂಪಾಯಿ ಇದ್ದ ಬೆಲೆ ಶನಿವಾರದಂದು ಕನಿಷ್ಠ 585 ರಿಂದ ಗರಿಷ್ಠ 685 ರೂಪಾಯಿಗಳಿಗೆ ತಲುಪಿತ್ತು.(ಗರಿಷ್ಠ ದರದಲ್ಲಿ 5 ರೂಪಾಯಿ ಏರಿಕೆ)
ಕೊಕ್ಕೋ(ಹಸಿ/ಒಣ) : ಸೋಮವಾರದಿಂದ ಶನಿವಾರದವರೆಗೆ ಯಾವುದೇ ಏರಿಳಿತವಿಲ್ಲದೇ ಹಸಿ ಕೊಕ್ಕೋ ಕನಿಷ್ಠ 70 ರಿಂದ ಗರಿಷ್ಠ 100 ರೂಪಾಯಿ ಹಾಗೂ ಒಣ ಕೊಕ್ಕೋ ಕನಿಷ್ಠ 290 ರಿಂದ ಗರಿಷ್ಠ 320 ರೂಪಾಯಿಗಳಲ್ಲೇ ವಾರಪೂರ್ತಿ ಸಂಪೂರ್ಣ ಸ್ಥಿರತೆಯನ್ನು ಕಾಯ್ದುಕೊಂಡಿದ್ದವು.
ಕೊಬ್ಬರಿ : ಸೋಮವಾರದಂದು ಕನಿಷ್ಠ 130 ರಿಂದ ಗರಿಷ್ಠ 162 ರೂಪಾಯಿ ಇದ್ದ ಬೆಲೆ ಶನಿವಾರದಂದು ಕನಿಷ್ಠ 140 ರಿಂದ ಗರಿಷ್ಠ 175 ರೂಪಾಯಿಗಳಿಗೆ ತಲುಪಿತ್ತು.(ಕನಿಷ್ಠ ದರದಲ್ಲಿ 10 ರೂಪಾಯಿ ಹಾಗೂ ಗರಿಷ್ಠ ದರದಲ್ಲಿ 13 ರೂಪಾಯಿ ಏರಿಕೆ)

3) ಕ್ಯಾಂಪ್ಕೋ ರಬ್ಬರ್ ಮಾರುಕಟ್ಟೆ : ರಬ್ಬರ್ ನ ಎಲ್ಲಾ ವಿಭಾಗಗಳಲ್ಲೂ ಏರಿಕೆ..!
ಈ ವಾರದ ಕ್ಯಾಂಪ್ಕೋ ರಬ್ಬರ್ ಮಾರುಕಟ್ಟೆಯಲ್ಲಿ ರಬ್ಬರ್ ನ ಎಲ್ಲಾ ವಿಭಾಗಗಳಲ್ಲೂ ಏರಿಕೆ ಕಂಡುಬಂದಿತ್ತು.
ಗ್ರೇಡ್ ರಬ್ಬರ್ : ಸೋಮವಾರದಂದು 280 ರೂಪಾಯಿ ಇದ್ದ ಬೆಲೆ ಶನಿವಾರದಂದು 282 ರೂಪಾಯಿಗೆ ತಲುಪಿತ್ತು.(2 ರೂಪಾಯಿ ಏರಿಕೆ)
ಲಾಟ್ ರಬ್ಬರ್ : ಸೋಮವಾರದಂದು 248 ರೂಪಾಯಿ ಇದ್ದ ಬೆಲೆ ಶನಿವಾರದಂದು 255 ರೂಪಾಯಿಗೆ ತಲುಪಿತ್ತು.(7 ರೂಪಾಯಿ ಏರಿಕೆ)
ಸ್ಕ್ರ್ಯಾಪ್(ಪ್ರಥಮ/ದ್ವಿತೀಯ) : ಸೋಮವಾರದಂದು ಸ್ಕ್ರ್ಯಾಪ್ ಪ್ರಥಮ ದರ್ಜೆ 170 ರೂಪಾಯಿ ಹಾಗೂ ಸ್ಕ್ರ್ಯಾಪ್ ದ್ವಿತೀಯ ದರ್ಜೆ 160 ರೂಪಾಯಿ ಇದ್ದ ಬೆಲೆ ಶನಿವಾರದಂದು ತಲಾ 2 ರೂಪಾಯಿ ಏರಿಕೆ ಕಂಡು ಪ್ರಥಮ ದರ್ಜೆ 172 ರೂಪಾಯಿ ಹಾಗೂ ದ್ವಿತೀಯ ದರ್ಜೆ 162 ರೂಪಾಯಿಗಳಿಗೆ ತಲುಪಿತ್ತು.

ಕೃಷಿಕರ ಗಮನಕ್ಕೆ : ಈ ಲೇಖನದಲ್ಲಿ ಪ್ರಕಟಿಸಲಾದ ಮಾರುಕಟ್ಟೆ ಧಾರಣೆಗಳು ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು ಪ್ರತಿದಿನವೂ ಕೂಡ “ಕ್ಯಾಂಪ್ಕೋ ನಿ. ಮಂಗಳೂರು ಸುಳ್ಯ ಶಾಖೆ” ಇವರಿಂದ ಪಡೆದುಕೊಂಡ ಈ ವಾರದ(ಆಗಸ್ಟ್ 03 ರಿಂದ ಆಗಸ್ಟ್ 08) ಕ್ಯಾಂಪ್ಕೋ ಮಾರುಕಟ್ಟೆ ಧಾರಣೆಯ ಅಂಕಿ-ಅಂಶಗಳಾಗಿವೆ. ಮಾರುಕಟ್ಟೆ ಧಾರಣೆಯು ಪ್ರತೀದಿನದ ಬೇಡಿಕೆ ಹಾಗೂ ಪೂರೈಕೆಗೆ ಅನುಗುಣವಾಗಿ ಕ್ಷಣಕ್ಷಣಕ್ಕೂ ಬದಲಾಗುತ್ತಿರುತ್ತದೆ. ಇಲ್ಲಿ ನೀಡಲಾದ ಮಾಹಿತಿಯು ಕೇವಲ ಕೃಷಿಕರ ಅರಿವಿಗಾಗಿ ಮಾತ್ರವಾಗಿದ್ದು, ಇದು ಭವಿಷ್ಯದ ದರಗಳ ಮುನ್ಸೂಚನೆಯಲ್ಲ. ಉತ್ಪನ್ನಗಳ ಗುಣಮಟ್ಟ, ತೇವಾಂಶ ಹಾಗೂ ಮಾರುಕಟ್ಟೆ ಆವಕಕ್ಕೆ ಅನುಗುಣವಾಗಿ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಮಂಡಿಗಳಲ್ಲಿ ದರಗಳು ಅಲ್ಪಮಟ್ಟಿಗೆ ವ್ಯತ್ಯಾಸವಿರಬಹುದು. ಆದ್ದರಿಂದ ನಿಖರ ಮಾಹಿತಿಗಾಗಿ ಕೃಷಿಕರು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ, ಮಾರುಕಟ್ಟೆ ಕೇಂದ್ರ ಅಥವಾ ಪರಿಚಿತ ವರ್ತಕರನ್ನು ಸಂಪರ್ಕಿಸಬಹುದಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading