Ad Widget

ಹರಿಹರ,ಕೊಲ್ಲಮೊಗ್ರು ಅವಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಗ್ರಾಮವಾಸ್ತವ್ಯ; ಜನವರಿ 21 ರ ಪೂರ್ವಭಾವಿ ಸಭೆಗೆ ಆಹ್ವಾನ

ಎತ್ತ ನೋಡಿದರೂ ಬರೀ ಕಾಡು, ಕಾಡಿನೊಳಗೆ ಬದುಕು ಕಟ್ಟಿಕೊಂಡವರದ್ದು ಹಲವು ಪಾಡು. ಒಂದೊಮ್ಮೆ ಕುಗ್ರಾಮವೆಂಬ ಹಣೆ ಪಟ್ಟಿಕೊಂಡ ಕೊಲ್ಲಮೊಗ್ರು, ಹರಿಹರ ಗ್ರಾ.ಪಂ ವ್ಯಾಪ್ತಿಯ ಹಳ್ಳಿಗಳಲ್ಲಿ (ಕಂದಾಯ ಗ್ರಾಮ) ಅಭಿವೃದ್ದಿಯ ಗೆರೆ ಮೂಡಿ ಕುಗ್ರಾಮ ಪಟ್ಟದಿಂದ ಹಳ್ಳಿಗಳು ಕಳಚಿಕೊಂಡಿದೆ. ಈ ಎರಡು ಪಂಚಾಯತ್ ವ್ಯಾಪ್ತಿ ಅಭಿವೃದ್ದಿ ಕಂಡರೂ ಇನ್ನೂ ನಿವಾರಣೆಯಾಗದೆ, ಪರಿಹಾರ ಕಾಣದೆ ಹಲವು ಸಮಸ್ಯೆಗಳು ಬಾಕುಳಿದಿವೆ....

ಮೇನಾಲ ಶ್ರೀ ವಯನಾಟ್ಟ್ ಕುಲವನ್ ದೈವಸ್ಥಾನದಲ್ಲಿ ಭತ್ತ ಅಳೆಯುವ ಮೂಲಕ ದೈವಕಟ್ಟು ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ

ಶ್ರೀ ವಯನಾಟ್ಟ್ ಕುಲವನ್ ದೈವಂಕಟ್ಟು ಮಹೋತ್ಸವದ (ಕೂಂ ಅಳಕ್ಕಲ್) ಭತ್ತ ಅಳೆಯುವ ಕಾರ್ಯಕ್ರಮ ಜ.17ರಂದು ನಡೆಯಿತು. ಇದರೊಂದಿಗೆ ದೈವಕಟ್ಟು ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು. ಬೆಳಗ್ಗೆ 9.57 ರಿಂದ10.40 ರ ಒಳಗೆ (ಕೂಂ ಅಳಕ್ಕಲ್) ಭತ್ತ ಅಳೆಯುವ ಕಾರ್ಯಕ್ರಮ ಮತ್ತು (ಅಡಯಾಳಂ ಕೊಡುಕ್ಕಲ್) ವೀಳ್ಯ ಕೊಡುವ ಕಾರ್ಯಕ್ರಮ ನಡೆದು, ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಮತ್ತು ಅನ್ನದಾನ...
Ad Widget

ಸುಳ್ಯ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲು

ಸುಳ್ಯ ಪೊಲೀಸ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಹಲವಾರು ರೀತಿಯಲ್ಲಿ ಮಾಹಿತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಇತ್ತ ಸುಳ್ಯದ ಅಜ್ಜಾವರದಲ್ಲಿ ಪೋಕ್ಸೋ ಪ್ರಕರಣ ನಡೆದ ಬಗ್ಗೆ ವರದಿಯಾಗಿದೆ. ಈ ಘಟನೆಯು ಅಜ್ಜಾವರ ಗ್ರಾಮದಲ್ಲಿ ನಡೆದಿದ್ದು ಇಬ್ಬರು ಕೂಡ ಆಪ್ರಾಪ್ತರಾಗಿದ್ದಾರೆ ಎಂದು ತಿಳಿದುಬಂದಿದೆ . ಈ ಕುರಿತಂತೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿನ್ನದ ಸರ ಕಳೆದುಹೋಗಿದೆ, ಸಿಕ್ಕಿದವರು ಹಿಂತುರುಗಿಸಲು ಮನವಿ

ಈ ಫೋಟೋದಲ್ಲಿ ಕಾಣುವ ಚಿನ್ನದ ಸರ ಪೆರಾಜೆ ಜ. ೧೫ ರಂದು ಸುಳ್ಯ ದ ಒಳಗೆ ಕಳೆದು ಹೋಗಿದೆ. ಸಿಕ್ಕಿದವರು ದಯವಿಟ್ಟು ಈ ಕೆಳಗಿನ ನಂಬರನ್ನು ಸಂಪರ್ಕಿಸಿ. ತಂದು ಕೊಟ್ಟ ವರಿಗೆ ಸೂಕ್ತ ಬಹುಮಾನ ಕೊಡ ಲಾಗುವುದು ೯೪೪೮೫ ೦೧೭೦೩ ,೯೯೦೦೪೧೭೧೬೫ ಎಂದು ಪ್ರಗತಿ ಆಂಬುಲೆನ್ಸ್ ಮಾಲಕರಾದ ಅಚ್ಚು ಅಶ್ರಫ್ ತಿಳಿಸಿದ್ದಾರೆ.

ಪೆರುವಾಜೆ ಜಾತ್ರೋತ್ಸವ: ಇಂದು ಶ್ರೀ ದೇವರ ಪೇಟೆ ಸವಾರಿ

ಮಾಗಣೆ ಕ್ಷೇತ್ರವಾದ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದು, ಇಂದು ಶ್ರೀ ದೇವರ ಪೇಟೆ ಸವಾರಿ ನಡೆಯಲಿದೆ. ಇಂದು ಬೆಳಿಗ್ಗೆ ಶ್ರೀ ದೇವರ ಬಲಿ ಹೊರಟು ಉತ್ಸವ, ಮಧ್ಯಾಹ್ನ ಗಂಟೆ 12.00ಕ್ಕೆ ಶ್ರೀ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ ಗಂಟೆ 5.00ಕ್ಕೆ ಶ್ರೀ ದೇವರ ಬಲಿ...

ಮಡಪ್ಪಾಡಿ; ಅಂಬೆಕಲ್ಲು ಮನೆಯ ಕೂಸಪ್ಪ ಗೌಡ ನಿಧನ

ಮಡಪ್ಪಾಡಿ ಗ್ರಾಮದ ಅಂಬೆಕಲ್ಲು ಮನೆಯ ಕೂಸಪ್ಪ ಗೌಡ ಇವರು ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಿಗ್ಗೆ ಸ್ವಗ್ರಹದಲ್ಲಿ ನಿಧನ ಹೊಂದಿದರು, ಇವರಿಗೆ ೭೦ ವರುಷ ವಯಸ್ಸಾಗಿತ್ತು. ಇವರು ಪತ್ನಿ ಲಲಿತಾ,ಪುತ್ರ ನವೀನ ಅಂಬೆಕಲ್ಲು, ಧನಂಜಯ ಅಂಬೆಕಲ್ಲು ಹಾಗೂ ಮಗಳು ನಮಿತಾ, ಸಹೋದರ ಸಹೋದರಿಯರನ್ನು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ

ಫೆ.1- 4 ಸುಳ್ಯ ರಂಗಮನೆಯಲ್ಲಿ ‘ರಂಗ ಸಂಭ್ರಮ’

ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ(ರಿ.) ಸುಳ್ಯ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದಲ್ಲಿ ಫೆಬ್ರವರಿ 01 ರಿಂದ 04 ರ ವರೆಗೆ ನಾಲ್ಕು ದಿನಗಳ 'ರಂಗ ಸಂಭ್ರಮ- 2024'  ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಫೆ.01 ರಂದು ಗುರುವಾರ ಮೂಡುಬಿದ್ರೆಯ  ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಕಲಾವಿದರಿಂದ ಶ್ರೀಮತಿ ವೈದೇಹಿ ರಚಿಸಿರುವ, ಡಾ.ಜೀವನ್ ರಾಂ...

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವಾರ್ಷಿಕ ಜಾತ್ರೋತ್ಸವ ಹಾಗೂ ಬ್ರಹ್ಮರಥೋತ್ಸವದ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮ

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಜ.16ರಂದು ರಾತ್ರಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಪಿ.ಪದ್ಮನಾಭ ಶೆಟ್ಟಿ ವಹಿಸಿದ್ದರು. ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರ, ಶ್ರೀಧಾಮ ಮಾಣಿಲದ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಆಶೀರ್ವಚನಗೈದು ಮಾತನಾಡುತ್ತಾ ಸನಾತನ ಸಂಸ್ಕೃತಿಯ...

ಹರಿಹರ,ಕೊಲ್ಲಮೊಗ್ರು ಅವಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಗ್ರಾಮವಾಸ್ತವ್ಯ - ಜನವರಿ 21 ರಂದು ಪೂರ್ವಭಾವಿ ಸಭೆಗೆ ಆಹ್ವಾನ ಎತ್ತ ನೋಡಿದರೂ ಬರೀ ಕಾಡು, ಕಾಡಿನೊಳಗೆ ಬದುಕು ಕಟ್ಟಿಕೊಂಡವರದ್ದು ಹಲವು ಪಾಡು. ಒಂದೊಮ್ಮೆ ಕುಗ್ರಾಮವೆಂಬ ಹಣೆ ಪಟ್ಟಿಕೊಂಡ ಕೊಲ್ಲಮೊಗ್ರು, ಹರಿಹರ ಗ್ರಾ.ಪಂ ವ್ಯಾಪ್ತಿಯ ಹಳ್ಳಿಗಳಲ್ಲಿ (ಕಂದಾಯ ಗ್ರಾಮ) ಅಭಿವೃದ್ದಿಯ ಗೆರೆ ಮೂಡಿ ಕುಗ್ರಾಮ ಪಟ್ಟದಿಂದ ಹಳ್ಳಿಗಳು ಕಳಚಿಕೊಂಡಿದೆ.ಈ ಎರಡು...

ರಾಜ್ಯ ಮಟ್ಟದ ಆಹ್ವಾನಿತ ಕರಾಟೆ ಚಾಂಪಿಯನ್‌ ಶಿಪ್ ನ ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ದಿಯಾ ಡಿ.ಎಸ್ ದಬ್ಬಡ್ಕ ಪ್ರಥಮ

ಮಂಗಳೂರು:-ಯಾಮೊಟೋ ಶೋಟೋಕಾನ್ ಕರಾಟೆ ಅಸೋಸಿಯನ್ನ್ ಟ್ರಸ್ಟ್ ಮಂಗಳೂರು ಹಾಗೂ ರೋಟರಿ ಕ್ಲಬ್ ಲೊರೊಟೊ ಹಿಲ್ಸ್ ಬಂಟ್ವಾಳ, ರೋಟರಿ ಕ್ಲಬ್ ಸಿದ್ದಕಟ್ಟೆ,ಪಲ್ಗುಣಿ ರೋಟರಿ ಕ್ಲಬ್,ಬಿ.ಸಿ ರೋಡು ಸಿಟಿ ವತಿಯಿಂದ ಬಿ.ಸಿ ರೋಡ್ ಸ್ಪರ್ಶ ಕಲಾಮಂದಿರದಲ್ಲಿ 14 ರಂದು ನಡೆದ ಪ್ರಥಮ ರಾಜ್ಯ ಮಟ್ಟದ ಆಹ್ವಾನಿತ ಕರಾಟೆ ಚಾಂಪಿಯನ್‌ ಶಿಪ್ 2024 ರ ಕಟಾ ಮತ್ತು ಕುಮಿಟೆ ವಿಭಾಗದಲ್ಲಿ...
Loading posts...

All posts loaded

No more posts

error: Content is protected !!