Ad Widget

ಕವನ : ಬದಲಾಗಿದ್ದು ವರ್ಷಗಳಷ್ಟೇ, ನಮ್ಮ ಬದುಕಲ್ಲ…



. . . . . . . . .

ಬದುಕಿನ ಕಷ್ಟ-ನೋವುಗಳು ಕಲಿಸುತ್ತಲೇ ಇರುತ್ತವೆ ನಮಗೆ ನೂರಾರು ಪಾಠಗಳನ್ನ, ಜೀವನದಲ್ಲಿ ಎಷ್ಟೇ ಪಾಠಗಳನ್ನು ಕಲಿತರೂ ತುತ್ತಿನ ಚೀಲವ ತುಂಬಿಸಲು ನಾವು ಹೋರಾಡಲೇಬೇಕು ಪ್ರತೀದಿನ, ಕೆಲವೊಮ್ಮೆ ಬದುಕಿನ ಕಷ್ಟ-ನೋವುಗಳೇ ತುಂಬಿಸುತ್ತವೆ ಖಾಲಿ ಹೊಟ್ಟೆಯನ್ನ, ಮರೆಸಿ ಹಸಿವನ್ನ…
ಪ್ರತೀದಿನ ಅದೆಷ್ಟೇ ಕಷ್ಟಪಟ್ಟು ದುಡಿದರೂ ನಾಳೆಗಳ ಚಿಂತೆ ಕಾಡುತ್ತಲೇ ಇರುವುದು ನಮ್ಮನ್ನ, ಆದರೆ ಇಂದಲ್ಲಾ ನಾಳೆ ನಮಗೂ ಒಳ್ಳೆಯ ದಿನಗಳು ಬರಬಹುದು ಎಂಬ ನಂಬಿಕೆಯಿಂದ ದೂಡುತ್ತಲೇ ಇರುತ್ತೇವೆ ನಾವು ಬದುಕನ್ನ…
ಆದರೆ ವಾಸ್ತವವೇನೆಂದರೆ ವರ್ಷಗಳೆಷ್ಟೇ ಬದಲಾದರೂ ಬದಲಾಗಲೇ ಇಲ್ಲ ನಮ್ಮ ಬದುಕಿನ ಬಣ್ಣ, ಕಷ್ಟ-ನೋವುಗಳು ಬಿಟ್ಟು ಹೋಗಲೇ ಇಲ್ಲ ನಮ್ಮನ್ನ…

. . . . . . .

✍️ಉಲ್ಲಾಸ್ ಕಜ್ಜೋಡಿ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading