
ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ ಮೂರುಕಲ್ಲಡ್ಕ ಮತ್ತು ಅಯ್ಯನಕಟ್ಟೆ ಜಾತ್ರೋತ್ಸವ ಸಮಿತಿ ಆಶ್ರಯದಲ್ಲಿ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಜಾತ್ರೋತ್ಸವ ಜ.26ರಿಂದ ಜ.29ರ ವರೆಗೆ ವಿಜೃಂಭಣೆಯಿಂದ ಜರಗಲಿದ್ದು, ಇದರ ಪೂರ್ವಭಾವಿಯಾಗಿ ಜ. 20ರಂದು ಮೂರುಕಲ್ಲಡ್ಕದಲ್ಲಿ ಉಗ್ರಾಣ ಮುಹೂರ್ತ ಮತ್ತು ಗೊನೆ ಮುಹೂರ್ತ ನಡೆಯಿತು. ಪ್ರಧಾನ ದೈವದ ಪಾತ್ರಿ ಲಕ್ಷ್ಮಣ ಗೌಡ ಬೇರಿಕೆ ದೇವತಾ ಪ್ರಾರ್ಥನೆ ನೆರವೇರಿಸಿದರು.
ಸೇವಾ ಸಮಿತಿ ಗೌರವಾಧ್ಯಕ್ಷರೂ ವಿಶ್ವಸ್ಥರೂ ಆದ ಬಾಳಿಲ ಸುಬ್ರಾಯ ಅಡಿಕೆಹಿತ್ಲು, ವಿಶ್ವಸ್ಥರಾದ ಎನ್. ವಿಶ್ವನಾಥ ರೈ ಕಳಂಜಗುತ್ತು, ವೆಂಕಟ್ರಮಣ ಗೌಡ ತಂಟೆಪ್ಪಾಡಿ, ಶೀನಪ್ಪ ಗೌಡ ತೋಟದಮೂಲೆ, ಅಧ್ಯಕ್ಷ ಚೆನ್ನಪ್ಪ ಗೌಡ ಕಜೆಮೂಲೆ, ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಕಿಲಂಗೋಡಿ, ಕೋಶಾಧಿಕಾರಿ ಪ್ರಭಾಕರ ಆಳ್ವ, ಸದಸ್ಯರಾದ ಕೂಸಪ್ಪ ಗೌಡ ಮುಗುಪ್ಪು, ಗಂಗಾಧರ ತೋಟದಮೂಲೆ, ಜಾತ್ರೋತ್ಸವ ಸಮಿತಿ 2024 ಗೌರವಾಧ್ಯಕ್ಷ ಸಪ್ತಗಿರಿ ಪುರಂದರ ಗೌಡ, ಅಧ್ಯಕ್ಷ ಶ್ರೀನಾಥ್ ರೈ ಬಾಳಿಲ, ಕಾರ್ಯದರ್ಶಿ ಕುಶಾಲಪ್ಪ ಗೌಡ ಬಿ ಮಣಿಮಜಲು, ಉಪಾಧ್ಯಕ್ಷ ಪುರುಷೋತ್ತಮ ತಂಟೆಪ್ಪಾಡಿ, ಜೊತೆ ಕಾರ್ಯದರ್ಶಿ ಕೌಶಿಕ್ ಕೊಡಪಾಲ, ಮಾರ್ಗದರ್ಶಕರಾದ ಮುಂಡುಗಾರು ಸುಬ್ರಹ್ಮಣ್ಯ, ಸುಧಾಕರ ರೈ ಎ.ಎಂ, ಬಾಳಿಲ ರಾಮಚಂದ್ರ ರಾವ್, ರುಕ್ಷ್ಮಯ್ಯ ಗೌಡ ಕಳಂಜ, ಅಚ್ಚುತ ಗೌಡ ಬಾಳಿಲ ಸೇರಿದಂತೆ ವಿವಿಧ ಸಮಿತಿಗಳ ಸಂಚಾಲಕರು, ಸದಸ್ಯರು, ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.