ತಾಲೂಕು ಪಂಚಾಯತ್ ಅಕ್ಷರ ದಾಸೋಹ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಮತ್ತು ಸ್ಪರ್ಧಾ ಕಾರ್ಯಕ್ರಮ ಜನವರಿ 7 ರಂದು ಕೆ.ಪಿ.ಎಸ್ (ಪ್ರೌಢ ಶಾಲಾ ವಿಭಾಗ)ಬೆಳ್ಳಾರೆ ಇಲ್ಲಿ ನಡೆಯಿತು.
ಅಕ್ಷರ ದಾಸೋಹ ಯೋಜನೆ ಸುಳ್ಯ ಇದರ ಸಹಾಯಕ ನಿರ್ದೇಶಕರಾದ ಶ್ರೀಮತಿ ವೀಣಾ ಎಂ.ಟಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಕೆ.ಪಿ.ಎಸ್ ಪ್ರೌಢ ಶಾಲಾ ವಿಭಾಗದ ಕಟ್ಟಡ ಸಮಿತಿಯ ಅಧ್ಯಕ್ಷರಾದ ಹರ್ಷ ಜೋಗಿಯಡ್ಕ ಅತಿಥಿಯಾಗಿ ಭಾಗವಹಿಸಿ ಅಕ್ಷರ ದಾಸೋಹ ನೌಕರರ ಸೇವಾ ಕಾರ್ಯವನ್ನು ಶ್ಲಾಘಿಸಿದರು.
ಕೆ.ಪಿ.ಎಸ್ ಬೆಳ್ಳಾರೆಯ ಉಪ ಪ್ರಾಂಶುಪಾಲರಾದ ಶ್ರೀಮತಿ ಉಮಾಕುಮಾರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಅಕ್ಷರ ದಾಸೋಹ ನೌಕರರ ಸಂಘದ ಕಾರ್ಯದರ್ಶಿ ಶ್ರೀಮತಿ ಪುಷ್ಪ , ಅಕ್ಷರ ದಾಸೋಹ ಕಛೇರಿ ಸಿಬ್ಬಂದಿ ಶ್ರೀಮತಿ ಶೋಭಾ ಮತ್ತು ಶ್ರೀ ಜಯಂತ.ಕೆ ಉಪಸ್ಥಿತರಿದ್ದರು.
ಹರಿಹರ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀ ಕುಶಾಲಪ್ಪ ಗೌಡ ಸ್ವಾಗತಿಸಿದರು. ಶಿಕ್ಷಕರಾದ ಶ್ರೀ ದಿನೇಶ ಗೌಡ ಕೆ ವಂದಿಸಿದರು. ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯ ಅಕ್ಷರ ದಾಸೋಹ ಸಿಬ್ಬಂದಿ ಶ್ರೀಮತಿ ಧನ್ಯಾ ಪ್ರಾರ್ಥಿಸಿದರು. ಶ್ರೀ ಲಿಂಗಪ್ಪ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.
ತೀರ್ಪುಗಾರರಾಗಿ ಶ್ರೀಮತಿ ಶಮಿತಾ ರೈ, ಶ್ರೀಮತಿ ನಿರ್ಮಲಾ ಜಯರಾಂ ಮತ್ತು ಶ್ರೀಮತಿ ಜ್ಯೋತಿ ಸಹಕರಿಸಿದರು. ಕುಕ್ಕೆಶ್ರೀ ಇಂಡೆನ್ ಗ್ಯಾಸ್ ಬೆಳ್ಳಾರೆ ಇವರು ಗ್ಯಾಸ್ ಸಿಲಿಂಡರ್ ಬಳಕೆಯ ಪ್ರಾತ್ಯಕ್ಷಿಕೆ ಮತ್ತು ಆರೋಗ್ಯ ಇಲಾಖೆಯ ವತಿಯಿಂದ ಆರೋಗ್ಯ ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ಅಕ್ಷರ ದಾಸೋಹ ಸಿಬ್ಬಂದಿಗಳು ವಿವಿಧ ರೀತಿಯ ರುಚಿ ಶುಚಿಯಾದ ಭಕ್ಷ್ಯವನ್ನು ಪ್ರದರ್ಶಿಸಿದರು. ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆ ವಿನೋಬನಗರ ಮತ್ತು ಕೆ.ಪಿ.ಎಸ್ ಪ್ರೌಢ ಶಾಲಾ ವಿಭಾಗ ಬೆಳ್ಳಾರೆ ತಾಲೂಕು ಮಟ್ಟಕ್ಕೆ ಆಯ್ಕೆಯಾದರು.
- Thursday
- November 21st, 2024