ಗುತ್ತಿಗಾರು : ರಾಘವೇಂದ್ರ ಬೇಕರಿ ಮಾಲಕರಿಂದ ವಿನೂತನ ಕಾರ್ಯಕ್ರಮ – ಹೊಸ ವರ್ಷದ ಮುನ್ನ ದಿನದ ವ್ಯಾಪಾರದ ಲಾಭವನ್ನು ಸಮಾಜಕ್ಕೆ ಹಸ್ತಾಂತರ

ಕಳೆದ ಹಲವಾರು ವರ್ಷದಿಂದ ತಮ್ಮ ಕಠಿಣ ಪರಿಶ್ರಮದ ಪರಿಣಾಮ ತಾಲೂಕಿನ ವಿವಿಧ ಕಡೆಗಳಲ್ಲಿ ತಮ್ಮ ಬೇಕರಿ ಮತ್ತು ಉಪಹಾರ ವ್ಯವಸ್ಥೆಯನ್ನು ಶುಚಿ ರುಚಿಯಾಗಿ ನೀಡುವುದರ ಜತೆಗೆ ಸಮಾಜಮುಖಿ ಕಾರ್ಯಕ್ರಮಗಳಿಗೆ ಕೊಡುಗೆ ನೀಡುವದರೊಂದಿಗೆ ಹಾಗೂ ಒಂದಷ್ಟು ಮಂದಿಗೆ ತಮ್ಮಿಂದ ಉದ್ಯೋಗ ದೊರಕುವಂತೆ ಮಾಡಿದ ಮಾಲಕರಾದ ಅನಿಲ್ ರವರು, ಕಳೆದ ಸಲ ಹೊಸ ವರ್ಷದ ಮುನ್ನದಿನದ ಬಿರಿಯಾನಿ ವ್ಯಾಪಾರದ ಲಾಭವನ್ನು ವಿವಿಧೆಡೆ ಸಹಾಯ ಧನ ನೀಡಿದ್ದು ಈ ವರ್ಷದ ಸಹಾಯ ಧನವನ್ನು ಗುತ್ತಿಗಾರಿನ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನ ಸೇವಾ ಯೋಜನೆಗೆ ಸಹಾಯ ಧನ ನೀಡುವ ಮೂಲಕ ಮಾದರಿಯಾಗಿದ್ದಾರೆ. ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ, ಸದಸ್ಯರು ಆದ ನಿವೃತ್ತ ಸೈನಿಕ ಮಹೇಶ್ ಕೊಪ್ಪತಡ್ಕ,ಉದಯ ಕುಮಾರ್ ಹಾಲೆಮಜಲು, ಮೋಹನ್ ಮುಕ್ಕೂರ್, ಶಶಿಕುಮಾರ್ ಕೊರತ್ಯೆಡ್ಕ, ಜಗದೀಶ್ ಕಡಬ, ಸಂತೋಷ್ ಪಂಜ. ಹಾಗೂ ಬೇಕರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

. . . . . . . . .

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading