ಮೀನುಗಾರಿಕೆ ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರರವರು ಕೊಲ್ಲಮೊಗ್ರು ಗ್ರಾಮದ ಮಲ್ಲಾಜೆ ಬೆಂಡೋಡಿ ರಸ್ತೆಯ ಮಲ್ಲಾಜೆ ಎಂಬಲ್ಲಿ ರೂ.10 ಲಕ್ಷ ರೂಪಾಯಿ ವೆಚ್ಚದ ರಸ್ತೆ ಕಾಂಕ್ರೀಟೀಕರಣದ ಮೂಲಕ ಈ ಭಾಗದ ಜನರ ಬಹುವರ್ಷದ ಬೇಡಿಕೆಗೆ ಸ್ಪಂದಿಸಿ ಫೆ.18 ರಂದು ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ವೆಂಕಟ್ ವಳಲಂಬೆ, ಸುಳ್ಯ ಬಿಜೆಪಿ ಮಂಡಲ ಅದ್ಯಕ್ಷರಾದ ಹರೀಶ್ ಕಂಜಿಪಿಲಿ, ಜಿಲ್ಲಾ ಓ.ಬಿ.ಸಿ ಕೋಶಾಧಿಕಾರಿಗಳಾದ ಮಾಧವ ಚಾಂತಾಳ, ಜಿಲ್ಲಾ ಹಾಲು ಪ್ರಕೋಷ್ಠದ ಸಹ ಸಂಚಾಲಕರಾದ ಹಿಮ್ಮತ್.ಕೆ.ಸಿ, ಕೇಶವ ಭಟ್ ಕಟ್ಟ, ಕೊಲ್ಲಮೊಗ್ರು ಗ್ರಾಮಪಂಚಾಯತ್ ಅದ್ಯಕ್ಷರಾದ ಉದಯ ಕೊಪ್ಪಡ್ಕ, ಕೊಲ್ಲಮೊಗ್ರು ಗ್ರಾಮಪಂಚಾಯತ್ ಉಪಾಧ್ಯಕ್ಷರಾದ ಜಯಶ್ರೀ ಚಾಂತಾಳ, ಕೊಲ್ಲಮೊಗ್ರು ಗ್ರಾಮಪಂಚಾಯತ್ ಸದಸ್ಯರಾದ ಅಶ್ವಥ್ ಯಳದಾಳು, ಮೋಹಿನಿ ಕಟ್ಟ, ಶುಭಲತಾ ಕಟ್ಟ, ಶಿವಮ್ಮ ಕಟ್ಟ, ಹರಿಹರ ಪಲ್ಲತ್ತಡ್ಕ ಗ್ರಾಮಪಂಚಾಯತ್ ಅದ್ಯಕ್ಷರಾದ ಜಯಂತ್ ಬಾಳುಗೋಡು, ಹರಿಹರ ಪಲ್ಲತ್ತಡ್ಕ ಗ್ರಾಮಪಂಚಾಯತ್ ಉಪಾಧ್ಯಕ್ಷರಾದ ವಿಜಯ ಅಂಗಣ, ಡ್ಯಾನಿ ಯಳದಾಳು, ಕಮಲಾಕ್ಷ ಗೌಡ ಮುಳ್ಳುಬಾಗಿಲು, ಕಿಶೋರ್ ಕುಮಾರ್ ಕೂಜುಗೋಡು, ಚಂದ್ರಹಾಸ ಶಿವಾಲ, ಕಟ್ಟ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಹರ್ಷ ಅಡ್ನೂರು ಮಜಲು, ಶೇಖರ್ ಕೊಂದಾಳ, ಸತೀಶ್ ಕೆರೆಕ್ಕೋಡಿ, ಶಿವರಾಮ ಚಾಂತಾಳ, ಬೂತ್ ಸಮಿತಿ ಅದ್ಯಕ್ಷರಾದ ಜಗದೀಶ್ ಬೆಂಡೋಡಿ, ಬೂತ್ ಕಾರ್ಯದರ್ಶಿ ಶಿವರಾಮ ಚಾಂತಾಳ, ಅಶ್ವಿನಿ ಬೆಂಡೋಡಿ, 1ನೇ ಬೂತ್ ನ ಅದ್ಯಕ್ಷರಾದ ರಾಕೇಶ್ ಮುಳ್ಳುಬಾಗಿಲು, ಕಾರ್ಯದರ್ಶಿ ಉದಯ ಶಿವಾಲ, ಕಲ್ಮಕಾರು ಬೂತ್ ಸಮಿತಿಯ ಕಾರ್ಯದರ್ಶಿ ಗುರುಪ್ರಸಾದ್ ನಿಡುಬೆ ಸೇರಿದಂತೆ ಊರವರು ಮುಂತಾದವರು ಉಪಸ್ಥಿತರಿದ್ದರು.
ವರದಿ :- ಉಲ್ಲಾಸ್ ಕಜ್ಜೋಡಿ