Ad Widget

ಗುತ್ತಿಗಾರು: ಬಿಜೆಪಿ ಬೂತ್‌ ಕಾರ್ಯಕರ್ತರ ಸಭೆ

ಗುತ್ತಿಗಾರು ಗ್ರಾಮದ ವಿವಿಧ ಬೂತ್‌ಗಳ  ಬಿಜೆಪಿ ಕಾರ್ಯಕರ್ತರ ಸಭೆಯು ಅ.30ರಂದು ಚಿಕ್ಮುಳಿಯಲ್ಲಿ ನಡೆಯಿತು.

. . . . . . . . .

ಗುತ್ತಿಗಾರು ಗ್ರಾಮದ ಬೂತ್ ಸಂಖ್ಯೆ 121, 122ನೇ ಬೂತಿನ ಕಾರ್ಯಕರ್ತರ ಸಭೆಯು ಅ 30 ರಂದು ದೇವಿಪ್ರಸಾದ್ ಚಿಕ್ಮುಳಿ ಇವರ ಮನೆಯಲ್ಲಿ ನಡೆಯಿತು. ಸಭೆಗೆ ಮಾನ್ಯ ಶಾಸಕರಾದ ಶ್ರೀ ಎಸ್ ಅಂಗಾರ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ವೆಂಕಟ್ ವಳಲಂಬೆ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ಮತ್ತು ಸುಳ್ಯ ಮಂಡಲ ಎಸ್ ಸಿ ಮೋರ್ಚಾದ ಅಧ್ಯಕ್ಷರಾದ ಅಚ್ಚುತ ಗುತ್ತಿಗಾರು ಗುತ್ತಿಗಾರು ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿಗಳಾದ ಶಿವಪ್ರಸಾದ್ ನಡುತೊಡು ಶಕ್ತಿ ಕೇಂದ್ರದ ಅಧ್ಯಕ್ಷರಾದ ಜಯಪ್ರಕಾಶ್ ಮೊಗ್ರ ಉಪಸ್ಥಿತರಿದ್ದರು. ಮಾನ್ಯ ಶಾಸಕರು ಸಭೆಯಲ್ಲಿ ಮಾತನಾಡಿ ಪಕ್ಷದ ಸಂಘಟನೆಯ ಬಗ್ಗೆ ಮತ್ತು ಈ ಬೂತ್ ಗಳಿಗೆ ಸಂಬಂಧಪಟ್ಟ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವ ಸಂದರ್ಭದಲ್ಲಿ ಇದರ ದಾರಿ ತಪ್ಪಿಸುವ ಮತ್ತು ಅಪಪ್ರಚಾರ ನಡೆಸುವವರ ವಿರುದ್ಧ ಬೇಸರ ವ್ಯಕ್ತಪಡಿಸಿದರಲ್ಲದೆ ಮುಂದಿನ ದಿನಗಳಲ್ಲಿ ಈ ಗ್ರಾಮಕ್ಕೆ ಮತ್ತು ವಿಶೇಷವಾಗಿ ಈ ಬೂತಿಗೆ ಸಂಬಂಧಪಟ್ಟಂತೆ ತ್ವರಿತವಾಗಿ ಆಗಬೇಕಾದ ಕಾಮಗಾರಿಗಳ ಬಗ್ಗೆ ಪ್ರಸ್ತಾಪಿಸಿ ಅವುಗಳನ್ನು ಅತೀ ಶೀಘ್ರದಲ್ಲಿ ಕಾರ್ಯರೂಪಕ್ಕೆ ತರುವುದಾಗಿ ತಿಳಿಸಿ ಕಾರ್ಯಕರ್ತರಲ್ಲಿ ಉಂಟಾದ ಗೊಂದಲಗಳಿಗೆ ತೆರೆ ಎಳೆದರು. ವೆಂಕಟ್ ವಳಲಂಬೆ ಮತ್ತು ವೆಂಕಟ್ ದಂಬೆಕೋಡಿ ಸಂದರ್ಬೋಚಿತವಾಗಿ ಮಾತನಾಡಿದರು. ಉಮೇಶ್ ಮಕ್ಕಿ ಸ್ವಾಗತಿಸಿ, ಜಯಪ್ರಕಾಶ್ ಮೊಗ್ರ ವಂದಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading