ತೊಡಿಕಾನ ದೇವರಗುಂಡಿಯ ಬಳಿ ಇತ್ತೀಚೆಗೆ ಕೆಲವರು ಆಶ್ಲೀಲ ಫೋಟೋ ತೆಗೆದಿರುವ ಘಟನೆ ಯ ಬಗ್ಗೆ ಅರಂತೋಡು ವಿಶ್ವ ಹಿಂದೂ ಪರಿಷದ್ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷದ್ ಭಜರಂಗದಳ ಸುಳ್ಯ ಪ್ರಚಂಡ ತೀವ್ರವಾಗಿ ಖಂಡಿಸಿದ್ದು, ಭಕ್ತಾಭಿಮಾನಿಗಳ ಭಾವನೆಗಳಿಗೆ ಘಾಸಿಯನ್ನುಂಟು ಮಾಡಿದೆ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಹಿಂಪ, ಭಜರಂಗದಳದ ವತಿಯಿಂದ ತೊಡಿಕಾನ ದೇವಸ್ಥಾನ ಆಡಳಿತಕ್ಕೆ ಹಾಗೂ ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ರವರಿಗೆ ನೀಡಿದ ಮನವಿಯಲ್ಲಿ ಒತ್ತಾಯಿಸಿದೆ. ಈ ಸಂದರ್ಭದಲ್ಲಿ ದೇವಸ್ಥಾನದ ಮುಖ್ಯಕಾರ್ಯನಿರ್ವಹಣಾಧಿಕಾರಿ ಆನಂದ ಕಲ್ಲಗದ್ದೆ, ವಿಹಿಂಪ ಸುಳ್ಯ ಪ್ರಖಂಡದ ಅಧ್ಯಕ್ಷ ಸೋಮಶೇಖರ್ ಪೈಕ, ಲತೀಶ್ ಗುಂಡ್ಯ, ಸನತ್ ಚೊಕ್ಕಾಡಿ, ರಾಜೇಂದ್ರ ಅರಂತೋಡು, ನವೀನ ಎಲಿಮಲೆ ಉಪಸ್ಥಿತರಿದ್ದರು.
- Thursday
- November 21st, 2024