ಗುತ್ತಿಗಾರು. ಅ.30: ಇಲ್ಲಿನ ಮೊಗ್ರ ಸೇತುವೆ ಹಾಗೂ ಕಮಿಲ ರಸ್ತೆಯ ದುರವಸ್ಥೆ ಕುರಿತಂತೆ ನಾಗರಿಕ ಹೋರಾಟ ಕ್ರಿಯಾ ಸಮಿತಿಯ ಪ್ರಮುಖ ಮಹೇಶ್ ಪುಚ್ಚಪ್ಪಾಡಿ ಪ್ರಧಾನಿಗೆ ಟ್ವೀಟ್ ಮಾಡಿದ್ದಾರೆ. ಮೊಗ್ರ ಸೇತುವೆ ರಚನೆಯ ಪ್ರಸ್ತಾವನೆ ಹಾಗೂ ಕಮಿಲ ಬಳ್ಪ ಸಂಪರ್ಕ ರಸ್ತೆ ಅಭಿವೃದ್ಧಿ ಕಳೆದ ಹಲವು ನೆನೆಗುದಿಗೆ ಬಿದ್ದಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಆಶ್ವಾಸನೆ ನೀಡುವ ಹೊರತು ಬೇರಾವುದೇ ಕ್ರಮ ಕೈಗೊಳ್ಳದಿರುವ ಕುರಿತು ಮೊಗ್ರ, ಕಮಿಲ, ಬಳ್ಳಕ್ಕದಲ್ಲಿ ಜನ ಒಗ್ಗಟ್ಟಿನ ಹೋರಾಟ ನಡೆಸುತ್ತಿದ್ದಾರೆ.
- Tuesday
- December 3rd, 2024