ಸುಳ್ಯ ಕೆ ಎಸ್ ಆರ್ ಟಿ ಸಿ ಬಸ್ ಕಂಡಕ್ಟರ್ ನಿಂದಾದ ಅಚಾತುರ್ಯಕ್ಕೆ ಸಹಾಯವಾಣಿಗೆ ಮಕ್ಕಳು ದೂರು ನೀಡಿದ್ದು, ಸಂದೇಶ ಬಂದ ಕೂಡಲೇ ಇಲಾಖೆ ತುರ್ತು ಸ್ಪಂದಿಸಿದ ಘಟನೆ ಅ.25 ರಂದು ನಡೆದಿದೆ.
ಮಡಪ್ಪಾಡಿಯ ಕಡ್ಯ ರೇಷ್ಮಾ ಯತೀಶ್ ರವರ ಪುತ್ರ 4 ನೇ ತರಗತಿ ವಿದ್ಯಾರ್ಥಿ ಆರ್ಯ ಕಡ್ಯ ಹಾಗೂ ಪವಿತ್ರ ಮಹೇಶ್ ದಂಪತಿಗಳ ಪುತ್ರ 8ನೇ ತರಗತಿಯ ವಿದ್ಯಾರ್ಥಿ ಹೃತಿಕ್ ಸುಳ್ಯದಿಂದ ಗುತ್ತಿಗಾರಿಗೆ ಬಸ್ಸಿನಲ್ಲಿ ಬರುವ ವೇಳೆ ಕಂಡಕ್ಟರ್ ಫುಲ್ ಟಿಕೇಟ್ ನೀಡಿದರೆನ್ನಲಾಗಿದೆ. ಇದನ್ನು ನೋಡಿದ ಅವರು 4 ತರಗತಿ ಮಕ್ಕಳಿಗೆ ಅರ್ಧ ಟಿಕೇಟ್ ಚಾರ್ಜ್ ತೆಗೆದುಕೊಳ್ಳಬೇಕೆಂದು ಪ್ರಶ್ನಿಸಿದ್ದಾರೆ. ಆದರೇ ಕಂಡೆಕ್ಟರ್ ಈಗ ಟಿಕೇಟ್ ಮಾಡಿ ಆಗಿದೆ ಇನ್ನೂ ಬದಲಾವಣೆ ಆಗುವುದಿಲ್ಲ ಎಂದು ಸಮಜಾಯಿಷಿ ನೀಡಿದರೆನ್ನಲಾಗಿದೆ.
ಈಗಿನ ಮಕ್ಕಳೇನು ಕಡಿಮೆ ನೇರವಾಗಿ ಬಸ್ಸಿನಲ್ಲಿ ಬರೆದಿದ್ದ ಸಹಾಯವಾಣಿಗೆ ಸಂದೇಶ ಕಳುಹಿಸಿದ್ದಾರೆ. ಕೂಡಲೇ ಸ್ಪಂದಿಸಿದ ಇಲಾಖೆ ಕಂಡೆಕ್ಟರ್ ಗೆ ಫೋನ್ ಮಾಡಿ ಟಿಕೇಟ್ ನೀಡುವಲ್ಲಿ ಉಂಟಾದ ಗೊಂದಲ ಸರಿಪಡಿಸುವಂತೆ ಸೂಚಿಸಿದ್ದಾರೆ. ಮಕ್ಕಳು ಬಸ್ಸಿನಿಂದ ಇಳಿಯುವ ಮೊದಲೇ ಕಂಡೆಕ್ಟರ್ ಮನದೊಳಗೆ ಬಯ್ಯುತ್ತ ಟಿಕೇಟ್ ಸರಿಪಡಿಸಿ ಬಾಕಿ ಹಣ ವಾಪಾಸ್ ನೀಡಿದ್ದಾರೆ. ಇದೀಗ ಇಲಾಖೆಯ ಸೂಕ್ತ ಸ್ಪಂದನೆಯ ವಿಷಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ.