Ad Widget

ಕೊಲ್ಲಮೊಗ್ರ : ರಸ್ತೆಯಲ್ಲಿ ಕೆಟ್ಟು ನಿಂತ ಯಂತ್ರ – ತೆರವುಗೊಳಿಸದಿದ್ದರೆ ಸವಾರರಿಗೆ ಕಾದಿದೆ ಸಂಕಟ

ಕಳೆದ ಒಂದು ತಿಂಗಳಿಂದ ಕೊಲ್ಲಮೊಗ್ರ ಪೇಟೆಯಲ್ಲಿ ತಾಂತ್ರಿಕ ಕಾರಣದಿಂದ ಕೆಟ್ಟು ನಿಂತಿರುವ ಜೀಯೋ ಕಂಪೆನಿಯ ಕೇಬಲ್ ಅಳವಡಿಕೆಯ ಯಂತ್ರದಿಂದಾಗಿ ವಾಹನ ಸವಾರರಿಗೆ ತೊಂದರೆ ಉಂಟುಮಾಡುತ್ತಿದೆ.

. . . . . . . . .

ಈ ಬಗ್ಗೆ ಜೀಯೋ ಕಂಟ್ರಾಕ್ಟರ್ ಗಳಿಗೆ ಹಲವು ಸಲ ಮನವಿ ಮಾಡಿದ್ದರು ಕೂಡ ಕ್ಯಾರೇ ಅನ್ನುತ್ತಿಲ್ಲ. ಕೆಲವೇ ದಿನಗಳಲ್ಲಿ ತೆರವುಗೊಳಿಸುತ್ತೇವೆ ಎಂದು ಭರವಸೆ ಮಾತ್ರ ನೀಡುತ್ತಿದ್ದಾರೆ. ರಾತ್ರಿ ವೇಳೆ ಹಾಗೂ ಮಳೆ ಬರುತ್ತಿರುವ ವೇಳೆ ವಾಹನ ಸವಾರರಿಗೆ ಈ ಯಂತ್ರ ನಿಂತಿರುವುದು ಗೋಚರಿಸುವುದಿಲ್ಲ. ರಸ್ತೆಯಲ್ಲಿಯೇ ನಿಂತಿರುವ ಯಂತ್ರದಿಂದಾಗಿ ಅಪಘಾತ ಸಂಭವಿಸುವ ಬದಲು ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳುವುದು ಒಳಿತು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading