
ಸುಳ್ಯ ಅರಂಬೂರು ಬದ್ರ್ ಮಸ್ಜಿದ್ ನಲ್ಲಿ ಹಲವಾರು ವರ್ಷಗಳಿಂದ ಮುಸಲ್ಮಾನ ಬಾಂಧವರು ದಿನದ ಐದು ಸಮಯದ ನಮಾಜ್ ನಿರ್ವಹಿಸಿಕೊಂಡು ಬರುತ್ತಿದ್ದರು. ಇದೀಗ ಈ ಮಸ್ಜಿದ್ ನಲ್ಲಿ ಶುಕ್ರವಾರ ದಿನದ ಸಾಮೂಹಿಕ ಜುಮ್ಮಾ ನಮಾಜ್ ನಿರ್ವಹಣೆಗೆ ಇಂದು ಚಾಲನೆ ನೀಡಲಾಯಿತು. ದಕ್ಷಿಣ ಕರ್ನಾಟಕ ಸಮಸ್ತ ಜಂಇಯ್ಯತ್ತುಲ್ ಉಲೇಮಾದ ಅಧ್ಯಕ್ಷರಾದ ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ರವರು ನಮಾಜಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಸೀದಿ ಕಮಿಟಿಯ ಅಧ್ಯಕ್ಷ ಎಸ್ ಭಾಷಾ ಸಾಹೇಬ್ ಅರಂಬೂರು, ಗೌರವಾಧ್ಯಕ್ಷ ಅಬ್ದುಲ್ ರಹಿಮಾನ್, ಕಾರ್ಯದರ್ಶಿ ಅಕ್ಬರ್ ಅರಂಬೂರು, ಗಾಂಧಿನಗರ ಕೇಂದ್ರ ಜುಮಾ ಮಸ್ಜಿದ್ ಅಧ್ಯಕ್ಷ ಹಾಜಿ ಆದಂ ಕುಂಞಿ ಕಮ್ಮಾಡಿ, ಹಿರಿಯರಾದ ಬಾಪು ಸಾಹೇಬ್ ಅರಂಬೂರು, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸದಸ್ಯ ಎಸ್ ಸಂಸುದ್ದಿನ್, ಸುಳ್ಯ ತಾಲೂಕು ಸುನ್ನಿ ಮಹಲ್ ಫೆಡರೇಷನ್ ಅಧ್ಯಕ್ಷ ಹಾಜಿ ಇಬ್ರಾಹಿಂ ಕತ್ತರ್ ಮಂಡೆಕೋಲು,ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ತಾಜ್ ಮಹಮ್ಮದ್, ಅಕ್ಬರ್ ಕರಾವಳಿ, ಶಾಫೀ ಕುತ್ತಮಟ್ಟೆ, ಶಹಿದ್ ಪಾರೆ, ಹಾಜಿ ಅಹಮದ್ ಮೊದಲಾದವರು ಉಪಸ್ಥಿತರಿದ್ದರು.