
ಬೆಳ್ಳಾರೆ ಝಖರಿಯಾ ಜುಮಾ ಮಸ್ಜಿದ್ ನಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ್ ರವರ ಜನ್ಮ ದಿನಾಚರಣೆ ಯ ಅಂಗವಾಗಿ ಈದ್ ಮಿಲಾದ್ ಕಾರ್ಯಕ್ರಮ ನಡೆಯಿತು. ಮಸೀದಿಯ ಆಡಳಿತಾಧಿಕಾರಿ ಮುಹಮ್ಮದ್ ರಾಫಿ ಯವರ ನಿರ್ಧೆಶನ ಪ್ರಕಾರ ಕೋವಿಡ್ ನಿಯಮಾನುಸಾರ ಸರಳವಾಗಿ ಆಚರಿಸಲಾಯಿತು. ಸ್ಥಳೀಯ ಖತೀಬ್ ಯೂನುಸ್ ಸಖಾಫಿ ವಯನಾಡ್ ರವರ ನೇತ್ರತ್ವದಲ್ಲಿ ಕಾರ್ಯಕ್ರಮ ನಡೆದು ಪ್ರವಾದಿಯವರ ಜೀವನ ಕುರಿತು ಸಂದೇಶ ಭಾಷಣ ಮಾಡಿದರು. ಕಾರ್ಯಕ್ರಮ ದಲ್ಲಿ ದರ್ಶ್ ಹಾಗೂ ಮದ್ರಸಾ ಅಧ್ಯಾಪಕರುಗಳು. ಜಮಾಅತ್ ಸದಸ್ಯ ರುಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.