

ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ,
ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ) ಪುತ್ತೂರು,
ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆ ,
ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಪುತ್ತೂರು, ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಇವುಗಳ ಸಹಯೋಗದೊಂದಿಗೆ ಉದ್ಯೋಗ ನೈಪುಣ್ಯ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಅ.28 ರಂದು ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಬಿ.ನಾರಾಯಣ ಶೇಖ ಸಭಾಭವನದಲ್ಲಿ ನಡೆಯಿತು.
ಶಿಬಿರವನ್ನು ಬೆಳ್ಳಾರೆ ಠಾಣೆಯ ಉಪನಿರೀಕ್ಷಕರಾದ ಆಂಜನೇಯ ರೆಡ್ಡಿ ದೀಪ ಬೆಳಗಿಸಿ ಉದ್ಘಾಟಿಸಿ, ಶಿಬಿರದ ಯಶಸ್ಸಿಗೆ ಶುಭಹಾರೈಸಿದರು.

ಕರ್ನಾಟಕ ದಕ್ಷಿಣ ಪ್ರಾಂತ ಸಹಸೇವಾ ಪ್ರಮುಖ್ ನ.ಸೀತಾರಾಮರವರು ಆತ್ಮನಿರ್ಭರ ಭಾರತಕ್ಕಾಗಿ ನಡೆಯುತ್ತಿರುವ ಉದ್ಯೋಗ ನೈಪುಣ್ಯ ತರಬೇತಿ ಶಿಬಿರದ ಧ್ಯೇಯೋದ್ದೇಶದ ಬಗ್ಗೆ ತಿಳಿಸಿದರು. ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಸಂಚಾಲಕಾದ ಮಹಾದೇವ ಶಾಸ್ತ್ರಿ, ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಗೋಪಿನಾಥ ಶೆಟ್ಟಿ, ಕಳಂಜ – ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾದ ಕೂಸಪ್ಪ ಗೌಡ ಮುಗುಪ್ಪು, ಕೆ.ಪಿ.ಎಸ್ ಬೆಳ್ಳಾರೆಯ ಪ್ರಾಂಶುಪಾಲರಾದ ಹಸೀನಾ ಬಾನು, ಪುತ್ತೂರು ಜೇನು ಉತ್ಪಾದಕರ ಸ.ಸಂಘದ ಅಧ್ಯಕ್ಷರಾದ ಚಂದ್ರ ಕೋಲ್ಚಾರ್, ಬೆಳ್ಳಾರೆ ಕೆಪಿಎಸ್ ನ ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಬಾಳಪ್ಪ, ಗ್ರಾಮ ವಿಕಾಸ ಪುತ್ತೂರು ಜಿಲ್ಲಾ ಸಂಯೋಜಕರಾದ ವಿನೋದ್, ಶಿಬಿರದ ಸಂಚಾಲಕರಾದ ಯತೀಶ್ ಆರ್ವಾರ, ಶಿಬಿರದ ಸಹಸಂಚಾಲಕರಾದ ರಾಮಕೃಷ್ಣ ಭಟ್ ಹಾಗೂ ಶ್ರೀನಾಥ್ ರೈ ಬಾಳಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸುಜನ್ ಕಿಲಂಗೋಡಿ ವೈಯಕ್ತಿಕ ಗೀತೆಯನ್ನು ಹಾಡಿದರು. ಶಿಬಿರದ ಸಂಚಾಲಕ ರಾಮಕೃಷ್ಣ ಭಟ್ ಕುರುಂಬಡೇಲು ಸ್ವಾಗತಿಸಿ, ಸಹಸಂಚಾಲಕ ಶ್ರೀನಾಥ್ ರೈ ಬಾಳಿಲ ವಂದಿಸಿದರು. ಶಿವಪ್ರಸಾದ್ ಪೆರುವಾಜೆ ಕಾರ್ಯಕ್ರಮ ನಿರೂಪಿಸಿದರು.
ತರಬೇತಿ ಶಿಬಿರವು ಅ. 28 ರಂದು ಮೊದಲ್ಗೊಂಡು ನ.03 ರವರೆಗೆ ನಡೆಯಲಿದೆ. ಶಿಬಿರದಲ್ಲಿ ಕೃಷಿ ಯಂತ್ರೋಪಕರಣ ದುರಸ್ತಿ ತರಬೇತಿ, ವಿದ್ಯುತ್ ಉಪಕರಣ ದುರಸ್ತಿ ತರಬೇತಿ, ಹೈನುಗಾರಿಕೆ , ಮೀನುಗಾರಿಕೆ,ಕೋಳಿ ಹಾಗೂ ಕುರಿ , ಆಡು ಸಾಕಣೆ ತರಬೇತಿ, ಪ್ಲಂಬಿಂಗ್ ಮತ್ತು ಇಲೆಕ್ತ್ರೀಷಿಯನ್ ತರಬೇತಿ, ಫ್ಯಾಶನ್ ಡಿಸೈನಿಂಗ್ ತರಬೇತಿ, ಕೃಷಿ, ಕಸಿ ಕಟ್ಟುವುದು, ಅಣಬೆ ಕೃಷಿ, ಜೇನು ಕೃಷಿ ತರಬೇತಿ, ಫುಡ್ ಟೆಕ್ನಾಲಜಿ ತರಬೇತಿ, ಮೊಬೈಲ್ ರಿಪೇರಿ ತರಬೇತಿ, ಕರಕುಶಲ ಸಾಮಾಗ್ರಿಗಳ ತಯಾರಿಕೆ ತರಬೇತಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.