Ad Widget

ಸುಬ್ರಹ್ಮಣ್ಯ : ಎಬಿವಿಪಿ ಅಭ್ಯಾಸ ವರ್ಗ ಸಮಾರೋಪ- ನೂತನ ಪದಾಧಿಕಾರಿಗಳ ಆಯ್ಕೆ : ನಗರ ಕಾರ್ಯದರ್ಶಿಯಾಗಿ ಇಲೈಅರಸ್

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಹ್ಮಣ್ಯ ಘಟಕದ ವತಿಯಿಂದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ನಗರ ಅಭ್ಯಾಸ ವರ್ಗ ನಡೆಯಿತು ಕಾರ್ಯಕ್ರಮವನ್ನು ಸ್ಮಿತಾ ಹೆಗ್ಡೆ ಜನರಲ್ ಮ್ಯಾನಜರ್ ಆರ್.ಎನ್. ಎಸ್. ಒನ್. ಸುಬ್ರಹ್ಮಣ್ಯ ಇವರು ಉದ್ಘಾಟಿಸಿದರು.

. . . . . . . . .

ವಿದ್ಯಾರ್ಥಿ ಪರಿಷತ್‌ ನ ಸಂಘಟನಾತ್ಮಕ ಕಾರ್ಯಗಳಲ್ಲಿ ಅಭ್ಯಾಸ ವರ್ಗ ಪ್ರಮುಖ ಪಾತ್ರ ವಹಿಸುತ್ತದೆ. ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ಪುನರ್ ನಿರ್ಮಾಣ ಎಂಬ ಉದಾತ್ತವಾದ ಚಿಂತನೆಯಲ್ಲಿ ಮುನ್ನಡೆಯುತ್ತಿದೆ. ವಿದ್ಯಾರ್ಥಿ ಪರಿಷತ್ ನ ಕಾರ್ಯಕರ್ತರ ವ್ಯಕ್ತಿತ್ವ ನಿರ್ಮಾಣದ ಕೇಂದ್ರಬಿಂದು ಈ ಅಭ್ಯಾಸ ವರ್ಗ. ಈ ಅಭ್ಯಾಸ ವರ್ಗದಲ್ಲಿ ವಿದ್ಯಾರ್ಥಿ ಪರಿಷತ್ ನ ಸೈದ್ಧಾಂತಿಕ ಭೂಮಿಕೆ, ನಮ್ಮ ಕಾರ್ಯಪದ್ಧತಿ ವಿಷಯಗಳ ಬಗ್ಗೆ ಮಂಗಳೂರು ವಿಭಾಗ ಪ್ರಮುಖರಾದ ಕೇಶವ್ ಬಂಗೇರ, ಹಾಗೂ ಬಸವೇಶ್ ಕೋರಿ ಯವರು ಮಾತನಾಡಿದರು. ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ನ.ಸೀತಾರಾಮ ಇವರು ಸಮರೋಪ ಬಾಷಣಗೈದರು. ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

. . . . . . .

ನಗರ ಕಾರ್ಯದರ್ಶಿ ಇಲೈಅರಸ್, ನಗರ ಸಹ ಕಾರ್ಯದರ್ಶಿಯಾಗಿ ತರುಣ್, ಚೈತನ್ಯ, ನವೀನ್, ತೀರ್ಥಪ್ರಸಾದ್, ಹಾಗೂ ಅಧ್ಯಯನ ವೃತ ಪ್ರಮುಖ್ ಆಗಿ ಸಾಕ್ಷಾತ್ ಅಲಂಕಾರ್ ಸಹ ಅಧ್ಯಯನ ಪ್ರಮುಖ್ ಆಗಿ ಇಂದ್ರಕುಮಾರ್, ವಿದ್ಯಾರ್ಥಿನಿ ಪ್ರಮುಖ್ ಆಗಿ ದಿವ್ಯ ಸಹ ವಿದ್ಯಾರ್ಥಿನಿ ಪ್ರಮುಖ್ ಆಗಿ ಸೌಜನ್ಯ, ಜಯಶ್ರೀ, ಹಾಗೂ ಸಾಮಾಜಿಕ ಜಾಲತಾಣ ಪ್ರಮುಖ್ ಆಗಿ ತೇಜಸ್, ಸಹ ಸಾಮಾಜಿಕ ಜಾಲತಾಣ ಪ್ರಮುಖ್ ಹರಿ ಚಂದ್ರನ್, ಹಾಗೂ ಹಾಸ್ಟೆಲ್ ಪ್ರಮುಖ್ ಆಗಿ ಕಾರ್ತಿಕ್ ಹಾಗೂ ಶರತ್ ಇವರು ಆಯ್ಕೆಯಾದರು.‌ ಈ ಸಂದರ್ಭದಲ್ಲಿ ಅನುಗ್ರಹ ಎಜುಕೇಶನ್ ಟ್ರಸ್ಟ್ ನ ಸಂಚಾಲಕರಾದ ಗಣೇಶ್ ನಾಯರ್ ಹಾಗೂ ಹಿರಿಯ ಕಾರ್ಯಕರ್ತರಾದ ಬುಕ್ಷಿತ್,ಅಜಿತ್ ಕಡಬ,ಪದ್ಮಕುಮಾರ್,ಅಜೇಯ ಬಾಳುಗೊಡು,ಪ್ರಕಾಶ್ ಬಾಳುಗೊಡು,ರಕ್ಷಿತ್ ಪರಾಮಲೆ, ಶ್ರೀಕುಮಾರ್ ಬಿಲದ್ವಾರ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading