ಸುಳ್ಯ ಅರಂಬೂರು ಮಹಾಲಕ್ಷ್ಮಿ ವಾಣಿಜ್ಯ ಸಂಕೀರ್ಣದಲ್ಲಿ ತವೀದ್ ಸುಳ್ಯ ರವರ ಮಾಲಕತ್ವದ ತವೀದ್ ಮಚ್ಚೀಸ್ ಮೀನು ಅಂಗಡಿ ಅ.26ರಂದು ಶುಭಾರಂಭಗೊಂಡಿತು.
ಮೀನು ವ್ಯಾಪಾರ ಕೇಂದ್ರದಲ್ಲಿ ಸಮುದ್ರದ ವಿವಿಧ ತರಹದ ತಾಜಾ ಮೀನುಗಳು ಕೈಗೆಟಕುವ ದರದಲ್ಲಿ ಲಭ್ಯವಿದೆ. ಮಂಗಳೂರಿನ ಮೀನು ಬಂದರಿನಿಂದ ನೇರವಾಗಿ ಖರೀದಿಸಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ನಮ್ಮಲ್ಲಿ ಇದೆಯೆಂದು ಮಾಲಕರು ತಿಳಿಸಿದ್ದಾರೆ. ನೂತನ ಸಂಸ್ಥೆಯನ್ನು ಇಕ್ರ ಜುಮಾ ಮಸ್ಜಿದ್ ನ ಪ್ರಧಾನಕಾರ್ಯದರ್ಶಿ ಇಸ್ಮಾಯಿಲ್ ಸಾಹೇಬ್ ಉದ್ಘಾಟಿಸಿದರು. ಸಂದರ್ಭದಲ್ಲಿ ಸ್ಥಳೀಯ ಹಿರಿಯರಾದ ಬಾಪು ಸಾಹೇಬ್, ಅಜೀಜ್ ಸಾಹೇಬ್, ಲತೀಫ್, ಗೋಪಾಲ, ರೋಷನ್, ಪ್ರದೀಪ್, ಪ್ರಕಾಶ್, ವೆಂಕಟೇಶ್, ಜಾವೀದ್, ಯಾಸೀರ್, , ಫಾಹಿಝ್ ಮೊದಲಾದವರು ಉಪಸ್ಥಿತರಿದ್ದರು.