

ಗುತ್ತಿಗಾರು ಗ್ರಾಮದ ಆಚಳ್ಳಿ ಕಾಲನಿ ನಿವಾಸಿ ಚರಂಬು ಅವರ ಪುತ್ರಿ ಜಯಶ್ರೀ (17)ಆತ್ಮಹತ್ಯೆಗೆ ಶರಣಾದ ದುರ್ದೈವಿ. ಅ.25 ರಂದು ಮಧ್ಯಾಹ್ನದ ವೇಳೆ ಮನೆ ಸಮೀಪದ ಗೇರು ಮರಕ್ಕೆ ಬಟ್ಟೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ವೇಳೆ ತಂದೆ, ತಾಯಿ ಕೆಲಸಕ್ಕೆ ತೆರಳಿದ್ದರು ಎಂದು ತಿಳಿದುಬಂದಿದೆ. ದೂರದ ಸಂಬಂಧಿಯೊರ್ವನ ಪ್ರೀತಿಸುವುದಕ್ಕೆ ಮನೆಯವರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಆತ್ಮಹತ್ಯೆ ಗೈದಿರುವ ಶಂಕೆ ಇದೆ ಎಂದು ತಾಯಿ ದೂರಿನಲ್ಲಿ ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಯುವಕ ಯುವತಿಯರು ಪ್ರೀತಿ ಪ್ರೇಮದ ಹೆಸರಲ್ಲಿ ಜೀವ ಕಳೆದುಕೊಳ್ಳುತ್ತಿರುವುದು ದುರಂತವೇ ಆಗಿದೆ.