ಕೊರೊನಾ ಲಾಕ್‌ಡೌನ್ ನಲ್ಲಿ ಹಲವು ಐಡಿಯಾಗಳು ಹೊರಗೆ ಬಂದಿದ್ದು, ಹಲವು ಪ್ರತಿಭೆಗಳು ಹೊರ ಜಗತ್ತಿಗೆ ಪರಿಚಯವಾಗಿವೆ. ಇದೇ ಹಿನ್ನಲೆಯಲ್ಲಿ ಜನ್ಮ ತಾಳಿದ್ದೇ “ಐಡಿಯಾ ಬಾಸ್ಕೆಟ್’ ಎಂಬ ಹವ್ಯಕ ಯೂಟ್ಯೂಬ್ ವಾಹಿನಿ. ಅಳಿಯುತ್ತಿರುವ ಹವ್ಯಕ ಭಾಷೆಯ ಘಮಲನ್ನು ಮತ್ತೆ ಹರಡಿಸಲು ತಯಾರಾದ ಈ ವಾಹಿನಿಯ ಕರ್ತೃ ಡಾ| ಆದಿತ್ಯ ಭಟ್ ಚಣಿಲ.
ವೃತ್ತಿಯಲ್ಲಿ ವೈದ್ಯ ವಿದ್ಯಾರ್ಥಿಯಾಗಿರುವ ಆದಿತ್ಯ ಕೊರೊನಾ ಲಾಕ್‌ಡೌನ್‌ನಲ್ಲಿ ಮನೆಯಲ್ಲೇ ಕಾಲ ಕಳೆಯುತ್ತಿರುವಾಗ ಹೊಳೆದ ಐಡಿಯಾವನ್ನೇ ಬಳಸಿಕೊಂಡು “ಐಡಿಯಾ ಬಾಸ್ಕೆಟ್”ನ್ನು ಸೃಷ್ಟಿಸಿದರು. ತಮ್ಮ ಗೆಳೆಯರಾದ ಈಶ್ವರ ಶರ್ಮ, ಓಂಕಾರ್, ವಿಘ್ನೇಶ್ ಭಟ್, ಸುಶ್ಮಿತಾ ಜೊತೆಗೂಡಿ ಆರಂಭಿಸಿದ ಈ ವಾಹಿನಿ ಹವ್ಯಕ ಭಾಷೆಯನ್ನೇ ಗುರಿಯಾಗಿಸಿಕೊಂಡು ರೂಪು ತಾಳಿದೆ.
ಈಗಾಗಲೇ ವಾಹಿನಿಯ ಪ್ರೋಮೋ ಹಾಗೂ ಕೆಲವು ವಿಡಿಯೋಗಳು ಈಗಾಗಲೇ ಅಪ್ಲೋಡ್ ಆಗಿದ್ದು, ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಪ್ರತಿ ದಿನ ‘ಹವ್ಯಕ ಚಿಂತನ’ ಎಂಬ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುತ್ತಿದ್ದು, ಇದರಲ್ಲಿ ಪೌರಾಣಿಕ, ಆಧ್ಯಾತ್ಮಿಕ ಚಿಂತನೆಗಳನ್ನು ಹವ್ಯಕ ಭಾಷೆಯಲ್ಲಿ ಪ್ರಸ್ತುತಪಡಿಸಲಾಗುತ್ತಿದೆ.
ಹೊಸಬರ ಈ ತಂಡದಿಂದ ಹೊಸತನದೊಂದಿಗೆ ಆರಂಭಗೊಂಡ “ಐಡಿಯಾ ಬಾಸ್ಕೆಟ್’ ಗೆ ನಿಮ್ಮ ಐಡಿಯಾಗಳನ್ನೂ ಹಾಕಬಹುದು. ನೀವು ಕೊಟ್ಟ ಐಡಿಯಾ ಎಲ್ಲೂ ವೇಸ್ಟ್ ಆಗದಂತೆ ಅವನ್ನು ಬಳಸಿಕೊಂಡು ಹೊಸ ಕಾರ್‍ಯಕ್ರಮಗಳನ್ನು ಸೃಷ್ಟಿಸಲಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡುತ್ತಿರುವ, ವಿವಿಧ ಟೆಕ್ನಿಕ್‌ಗಳನ್ನು ಹೊಂದಿರುವ ಪ್ರತಿಭೆಗಳ ಅನಾವರಣಕ್ಕೆ “ಐಡಿಯಾ ಬಾಸ್ಕೆಟ್” ಪೂರಕವಾಗಿ ಕೆಲಸ ಮಾಡಲಿದೆ, ಎನ್ನುತ್ತಾರೆ ವಾಹಿನಿಯ ಮುಖ್ಯಸ್ಥ ಡಾ| ಆದಿತ್ಯ ಚಣಿಲ. ನೀವು ವಾಹಿನಿಯ ಕಾರ್‍ಯಕ್ರಮಗಳನ್ನು ವೀಕ್ಷಿಸಿ ನಿಮ್ಮ ಐಡಿಯಾಗಳನ್ನು ಕಮೆಂಟ್ ಮೂಲಕ ತಿಳಿಸಿ. ಚಾನಲ್ ಲಿಂಕ್ ವೀಕ್ಷಿಸಲು ಈ ಲಿಂಕ್ ಬಳಸಿ
https://www.youtube.com/channel/UC-h9NlhEysvTEYdQVn7d-YA
ಪ್ರಸಾದ್ ಕೋಲ್ಚಾರ್.