Ad Widget

ಗುತ್ತಿಗಾರು : ಅಕ್ರಮ ಮರ ಸಾಗಾಟ ಪತ್ತೆ – ಟಿಪ್ಪರ್ ಚಾಲಕ ವಶ

ಐನೆಕಿದು ಕಡೆಯಿಂದ ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ಟಿಪ್ಪರ್ ಹಾಗೂ ಚಾಲಕ ನನ್ನು ಸುಬ್ರಹ್ಮಣ್ಯ ಅರಣ್ಯ ಇಲಾಖೆಯವರು ವಶಕ್ಕೆ ಪಡೆದ ಘಟನೆ ಅ.25 ರಂದು ನಡೆದಿದೆ.

. . . . . . . . .

ಕಿರಾಲ್ ಬೋಗಿ ಮತ್ತು ಹೆಬ್ಬಲಸು ಮರದ ಸೈಜುಗಳನ್ನು ಟಿಪ್ಪರ್ ನಲ್ಲಿ ಸಾಗಿಸುತ್ತಿದ್ದಾಗ ಗುತ್ತಿಗಾರು ಸಮೀಪ ಶಾಖಾ ಫಾರೆಸ್ಟರ್ ಮನೋಜ್, ಅರಣ್ಯ ರಕ್ಷಕ ಧನಂಜಯ, ವೀರಭದ್ರಯ್ಯ ಕರಣೀಮಠ, ಅರಣ್ಯ ವೀಕ್ಷಕ ಬಸಪ್ಪ ಮತ್ತಿತರರು ಸೇರಿ ತಡೆಹಿಡಿದ್ದರು. ಮರ ಸಾಗಟಕ್ಕೆ ಯಾವುದೇ ದಾಖಲೆಗಳು ಇಲ್ಲದ ಕಾರಣ ಮರ, ವಾಹನ, ಚಾಲಕನನ್ನು ವಶಪಡಿಸಿಕೊಂಡು ವಲಯ ಅರಣ್ಯಾಧಿಕಾರಿ ಎದುರು ಹಾಜರು ಪಡಿಸಲಾಗಿದ್ದು, ಚಾಲಕನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಡಿಸಿಎಫ್ ಕರಿಕಲನ್, ಎಸಿಎಫ್ ಆಸ್ಟಿನ್, ಆರ್ ಎಫ್ ಒ ರಾಘವೇಂದ್ರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading