ಎಲಿಮಲೆ ಪ್ರೌಢ ಶಾಲಾ ಬಳಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆ ಉದ್ಘಾಟನೆ ಇಂದು ನೆರವೇರಿತು. ಊರಿನ ಹಿರಿಯರಾದ ಸುಬ್ರಮಣ್ಯ ಭಟ್ ಚಳ್ಳ ಉದ್ಘಾಟಿಸಿ ಶುಭ ಹಾರೈಸಿದರು. ಶ್ರೀಮತಿ ನೀಲಮ್ಮ ಮಣಿಯೂರು ರಿಬ್ಬನ್ ಕತ್ತರಿಸಿ ರಸ್ತೆ ಸಂಚಾರಕ್ಕೆ ಚಾಲನೆ ನೀಡಿದರು. ಶೈಲೇಶ್ ಅಂಬೆಕಲ್ಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪ್ರೌಢ ಶಾಲಾ ಮುಖ್ಯ ಗುರುಗಳಾದ ಚಂದ್ರಶೇಖರ್ ಪೇರಾಲ್, ಡಿ ಟಿ ದಯಾನಂದ, ಸೂರ್ಯನಾರಾಯಣ ಭಟ್ ಮೂಲೆತೋಟ, ಜಯಪಾಲ ಅಂಬೆಕಲ್ಲು, ಕೇಶವ ಕಾಯರ, ಜಾಹ್ನವಿ, ವಿಶ್ವನಾಥ ಕಾಡುಜಬಳೆ, ಶಾಲಾ ಅಧ್ಯಾಪಕರು ಅಲ್ಲದೇ ರಸ್ತೆಯ ಅನೇಕ ಫಲಾನುಭವಿಗಳು ಉಪಸ್ಥಿತರಿದ್ದರು.
ದೇವಚಳ್ಳ ಒಂದನೇ ವಾರ್ಡ್ ನ ವಿವಿಧ ಕಾಮಗಾರಿಗಳನ್ನು ಕ್ಲಪ್ತ ಸಮಯದಲ್ಲಿ ಉತ್ತಮವಾಗಿ ನಿರ್ಮಿಸಿಕೊಟ್ಟಿರುವ ಗುತ್ತಿಗೆದಾರರಾದ ಚಂದ್ರಶೇಖರ ಅಡ್ಪಂಗಾಯ ರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.