ಬೆಳ್ಳಾರೆಯ ಮುಖ್ಯ ರಸ್ತೆಯಲ್ಲಿರುವ ಶ್ರೀದೇವಿ ಹೈಟ್ಸ್ ನ 1ನೇ ಮಹಡಿಯಲ್ಲಿ ದೀಕ್ಷಿತ್ ಪೋನಡ್ಕರವರ ಮಾಲಕತ್ವದಲ್ಲಿ ಅಭಿನವ ಡಿಜಿಟಲ್ ಸೇವಾ ಎಂಟರ್ ಪ್ರೈಸಸ್ ಸಂಸ್ಥೆ ಅ.26ರಂದು ಶುಭಾರಂಭಗೊಂಡಿತು. ಬೆಳಗ್ಗೆ 7 ಗಂಟೆಗೆ ಗಣಹೋಮ ನೆರವೇರಿತು.
ಬೆಳ್ಳಾರೆ ಆರಕ್ಷಕ ಠಾಣೆಯ ಎಸ್.ಐ. ಆಂಜನೇಯ ರೆಡ್ಡಿ ದೀಪ ಬೆಳಗಿಸಿ ಉದ್ಘಾಟನೆಗೈದು ಶುಭಹಾರೈಸಿದರು. ಈ ಸಂದರ್ಭದಲ್ಲಿ ಜ್ಞಾನದೀಪ ವಿದ್ಯಾಸಂಸ್ಥೆಯ ಉಮೇಶ್ ಮಣಿಕ್ಕಾರ, ಉದ್ಯಮಿಗಳಾದ ಪದ್ಮನಾಭ ಶೆಟ್ಟಿ ಪೆರುವಾಜೆ, ಧಾರ್ಮಿಕ ಮುಂದಾಳು ಪ್ರದೀಪ್ ಕುಮಾರ್ ರೈ ಪನ್ನೆ, ಅಜಂತಾ ಮೊಬೈಲ್ಸ್ ನ ಜಯಂತ್ ಮಡಪ್ಪಾಡಿ, ಚಾರ್ವಕ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾದ ಆನಂದ ಗೌಡ ಮೇಲ್ಮನೆ ಹಾಗೂ ಕರುಣಾಕರ ಗೌಡ ಪೋನಡ್ಕ, ಶ್ರೀಮತಿ ಕಮಲಾಕ್ಷಿ ಪೋನಡ್ಕ, ದೀಪಿಕಾ ಪೋನಡ್ಕ, ಹರ್ಷಿತ್ ಪೋನಡ್ಕ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಜನೀಶ್ ಪೆರುವಾಜೆ ನಿರೂಪಿಸಿದರು.
ಸಂಸ್ಥೆಯಲ್ಲಿ ಸಂಧ್ಯಾ ಸುರಕ್ಷಾ, ಹಿರಿಯ ನಾಗರಿಕರ ಕಾರ್ಡ್, ಪಾನ್ ಕಾರ್ಡ್, ಕಿಸಾನ್ ಸನ್ಮಾನ್ ಯೋಜನೆ, ಹೊಸ ರೇಷನ್ ಕಾರ್ಡ್ ಮತ್ತು ಸೇರ್ಪಡೆ, ಆಯುಷ್ಮಾನ್ ಕಾರ್ಡ್ ಹಾಗೂ ಇನ್ನಿತರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಆನ್ಲೈನ್ ಯೋಜನೆಗಳನ್ನು ಮಾಡಿಕೊಡಲಾಗುವುದು. ಅಲ್ಲದೇ ಜೆರಾಕ್ಸ್, ಲ್ಯಾಮಿನೇಶನ್, ವಾಹನ ಮತ್ತು ಆರೋಗ್ಯ ವಿಮೆ, ಟಿ.ವಿ ಮತ್ತು ಮೊಬೈಲ್ ರೀಚಾರ್ಜ್, ಬಸ್ಸು ರೈಲು ಮತ್ತು ವಿಮಾನ ಬುಕ್ಕಿಂಗ್, ಪಿ.ಎಫ್ ಹಾಗೂ ಇ.ಎಸ್.ಐ ಸಂಬಂಧಿತ ಕೆಲಸಗಳು ಸೇರಿದಂತೆ ವಿವಿಧ ಸೇವೆಗಳು ಲಭ್ಯವಿರಲಿದೆ ಎಂದು ಮಾಲಕರು ತಿಳಿಸಿದ್ದಾರೆ.