ಸುಳ್ಯ ನ್ಯಾಯಲಯದಲ್ಲಿ ದುರ್ಗಾ ಪೂಜೆ ಹಾಗು ಆಯುಧಪೂಜೆ ಇಂದು ನೆರವೇರಿತು. ಕಂಜರ್ಪಣೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರು ಹಾಗೂ ನ್ಯಾಯವಾದಿ ರಾಮಚಂದ್ರ ಶ್ರೀಪಾದ ಹೆಗಡೆ ಅವರ ನೇತೃತ್ವದಲ್ಲಿ ಪೂಜಾ ವಿಧಿ ನೆರವೇರಿಸಿಲಾಯಿತು.
ಈ ಸಂದರ್ಭ ಸುಳ್ಯ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಎಂ. ಪುರುಷೋತ್ತಮ,ಕಿರಿಯ ನ್ಯಾಯಾಧೀಶರಾದ ಯಶವಂತ ಕುಮಾರ್, ವಕೀಲರ ಸಂಘದ ಅಧ್ಯಕ್ಷ ಎಂ ವೆಂಕಪ್ಪ ಗೌಡ ಹಾಗೂ ವಕೀಲರು, ನ್ಯಾಯಾಲಯದ ಸಿಬ್ಬಂದಿಗಳು, ಸರಕಾರಿ ಅಭಿಯೋಜಕರು ಮತ್ತಿತರರು ಹಾಜರಿದ್ದರು.