ಅಧಿಕಾರಿಗಳ ಕಣ್ಮುಂದೆಯೇ ಸುಳ್ಯ ಕಂದಾಯ ಕಚೇರಿಯ ಮುಂಭಾಗದಲ್ಲಿ ಒಳಚರಂಡಿಯ ಕೆಸರು ನೀರು ಕಳೆದ ಮೂರು ನಾಲ್ಕು ತಿಂಗಳುಗಳಿಂದ ಹೊರಬರುತ್ತಿದ್ದು ಪರಿಸರ ದುರ್ನಾತದಿಂದ ಕೂಡಿದೆ. ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಸಂಪೂರ್ಣ ದುರಸ್ತಿ ಮಾಡಿಲ್ಲ. ಒಂದೆರಡು ಬಾರಿ ಅದನ್ನು ತೇಪೆ ಹಚ್ಚುವ ಕೆಲಸವನ್ನು ಮಾಡಿದ್ದಾರೆ. ಅದೇ ರಸ್ತೆಯಲ್ಲಿ ಮೆಸ್ಕಾಂ ಕಚೇರಿ, ಸುಳ್ಯ ತಾಲೂಕು ಕಚೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮತ್ತು ಅಭಿವೃದ್ಧಿ ಇಲಾಖೆ, ಪೋಲೀಸ್ ಸರ್ಕಲ್ ಕಛೇರಿ ಮುಂತಾದ ಸರ್ಕಾರಿ ಕಛೇರಿಗಳು ಇದ್ದು ಸಾರ್ವಜನಿಕರು ಮೂಗು ಮುಚ್ಚಬೇಕಾದ ಪರಿಸ್ಥಿತಿ ಇದೆ. ಒಳಚರಂಡಿಯಿಂದ ಹೊರಬಂದ ನೀರು ಕಂದಾಯ ಇಲಾಖೆ ಇಲಾಖೆಯ ಕಚೇರಿಯ ಮುಂಭಾಗದಲ್ಲಿ ಹಾದುಹೋಗುತ್ತಿದೆ. ಕಚೇರಿಯ ವ್ಯವಸ್ಥೆಯೇ ದುರವಸ್ಥೆಯ ಸ್ಥಿತಿಯಲ್ಲಿದ್ದು ಇನ್ನು ಸಾರ್ವಜನಿಕರ ಸಮಸ್ಯೆಗಳಿಗೆ ನಾವು ಹೇಗೆ ಸ್ಪಂದಿಸುವುದು ಎಂಬುವುದನ್ನು ತೋರಿಸಿ ಕೊಟ್ಟಂತೆ ಭಾಸವಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಇದೀಗ ರಸ್ತೆಯಲ್ಲಿ ಹರಿಯುತ್ತಿದ್ದ ಕೊಳಚೆನೀರನ್ನು ಕಂದಾಯ ಇಲಾಖೆಯ ಹಿಂಬದಿಗೆ ಹರಿಯುವಂತೆ ಮಾಡಿದ್ದಾರೆ.
- Tuesday
- December 3rd, 2024