ಸುಳ್ಯದಲ್ಲಿ ಸುಮಾರು 11 ವರ್ಷಗಳಿಂದ ಜನರಿಗೆ ಉತ್ತಮ ಸೇವೆಯ ಮುಖಾಂತರ ಆಯುರ್ಧಾಮ ಆಸ್ಪತ್ರೆ ಆಯುರ್ವೇದ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸುವುದರ ಜತೆಗೆ ಜನಮನ್ನಣೆ ಗಳಿಸಿದೆ. ಹಲವಾರು ವಿದೇಶಿಗರು ಕೂಡ ಆಯುರ್ವೇದ ಚಿಕಿತ್ಸೆ ಹಾಗೂ ಅಧ್ಯಯನಕ್ಕಾಗಿ ಇಲ್ಲಿಗೆ ಆಗಮಿಸಿದ್ದರು. ಇದೀಗ ಸುಳ್ಯದ ಹಳೆಗೇಟಿನಲ್ಲಿ ನೂತನವಾಗಿ ಸಕಲ ವ್ಯವಸ್ಥೆಗಳೊಂದಿಗೆ ಆಸ್ಪತ್ರೆ ಸಂಕೀರ್ಣ ನಿರ್ಮಾಣಗೊಂಡು ಜನಸೇವೆ ಸಿದ್ದಗೊಂಡಿದೆ. ಅ.18 ಮತ್ತು ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಗಣಹೋಮ ವಾಸ್ತುಹೋಮ,ಸುದರ್ಶನ ಹೋಮ,ಧನ್ವಂತರಿ ಪೂಜೆಯನ್ನು ಪುರೋಹಿತ ನಾಗರಾಜ್ ಭಟ್ ನೆರವೇರಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಹರಿಪ್ರಸಾದ್ ಶೆಟ್ಟಿ, ಡಾ.ಸುಷ್ಮಾ ಹೆಚ್. ಶೆಟ್ಟಿ, ಶ್ರೀ ಪುರುಷೋತ್ತಮ ಶೆಟ್ಟಿ, ಶ್ರೀ ಶಿವಪ್ರಸಾದ್ ಶೆಟ್ಟಿ, ಡಾ. ಅಭಿಜಿತ್ ಕೆ.ಪಿ., ಆಸ್ಪತ್ರೆಯ ಕಟ್ಟಡ ನಿರ್ಮಾಣ ಮಾಡಿದ ಡಿ.ಕೆ.ಎಸ್. ಕಸ್ಟ್ರಕ್ಷನ್ ನ ದೇವಿಪ್ರಸಾದ್ ಸುಳ್ಯ ಮತ್ತಿತರರು ಉಪಸ್ಥಿತರಿದ್ದರು. ಆಸ್ಪತ್ರೆಯ ಸಂಪೂರ್ಣ ಕೆಲಸ ಕಾರ್ಯಗಳು ಮುಗಿದು ಶೀಘ್ರದಲ್ಲಿ ಸಂಪೂರ್ಣ ಜನಸೇವೆಗೆ ತೆರೆದುಕೊಳ್ಳಲಿದೆ. ನುರಿತ ವೈದ್ಯರಿಂದ ವಿಶೇಷವಾಗಿ ಕೇರಳಿಯ ಪಂಚಕರ್ಮ ಚಿಕಿತ್ಸೆ ಲಭ್ಯವಿದೆ ಎಂದು ಆಡಳಿತ ನಿರ್ದೇಶಕ ಡಾ.ಹರಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.