
ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ ಮತ್ತು ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ 49 ನೇ ವರ್ಷದ ದಸರಾ ಕಾರ್ಯಕ್ರಮದಲ್ಲಿ ಅ.21 ರಂದು ಸುಳ್ಯ ದ ಮಹಾತ್ಮ ಗಾಂಧಿ ಚಾರಿಟೇಬಲ್ ಟ್ರಸ್ಟ್ (ರಿ) ಸುಳ್ಯ ಇದರ ವತಿಯಿಂದ ಕೊರೋನಾ ಜಾಗೃತಿ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಲಾಯಿತು. ಆರೋಗ್ಯ ವಾರಿಯರ್ಸ್ ಗಳಾಗಿ ಭವಾನಿ ಶಂಕರ್ ಕಲ್ಮಡ್ಕ, ನಗರ ಪಂಚಾಯತ್ ಸದಸ್ಯ ಧೀರಾ ಕ್ರಾಸ್ತಾ, ಮಾಜಿ ನಗರ ಪಂಚಾಯತ್ ಸದಸ್ಯೆ ಶ್ರೀಲತಾ ಪ್ರಸನ್ನ ಭಾಗವಹಿಸಿದ್ದರು. ಟ್ರಸ್ಟ್ ಸದಸ್ಯರಾದ ಗೋಕುಲ್ ದಾಸ್, ಶಶಿಧರ ಎಂ ಜೆ ಸಹಕರಿಸಿದರು.