ವಿಶ್ವ ಹಿಂದೂ ಪರಿಷದ್ ಭಜರಂಗದಳದ ನೂತನ ಮುಕ್ಕೂರು – ಕುಂಡಡ್ಕ ಛತ್ರಪತಿ ಶಾಖೆಯ ಉದ್ಘಾಟನಾ ಕಾರ್ಯಕ್ರಮವು ಅ.18 ರಂದು ಪೆರುವಾಜೆಯ ಜೆ.ಡಿ ಆಡಿಟೋರಿಯಂನಲ್ಲಿ ನಡೆಯಿತು.
ಅಯೋಧ್ಯಾ ಕರಸೇವಕರಾದ ಯಶೋಧ ಪ್ರಭು ಏನಡ್ಕ ಪೆರುವಾಜೆ ಇವರು ಉದ್ಘಾಟಿಸಿದರು. ಭಜರಂಗದಳ ಪ್ರಾಂತ ಸಹ ಸಂಯೋಜಕ್ ಮುರಳಿಕೃಷ್ಣ ಹಸಂತಡ್ಕ ದಿಕ್ಸೂಚಿ ಭಾಷಣಗೈದರು. ಮುಖ್ಯ ಅತಿಥಿಗಳಾಗಿ ಪುತ್ತೂರು ಭಜರಂಗದಳ ಸಂಯೋಜಕರಾದ ಶ್ರೀಧರ್ ತೆಂಕಿಲ, ಸುಳ್ಯ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ ಸೋಮಶೇಖರ್ ಪೈಕ, ಗಣೇಶ್ ಕುಂಜಾಡಿ, ಭಜರಂಗದಳ ಜಿಲ್ಲಾ ಸಹ ಸಂಯೋಜಕ್ ಲತೀಶ್ ಗುಂಡ್ಯ, ಸುಳ್ಯ ವಿಹಿಂಪ ಪ್ರಧಾನ ಕಾರ್ಯದರ್ಶಿ ರಂಜಿತ್, ಬೆಳ್ಳಾರೆ ವಾಲ್ಮೀಕಿ ಶಾಖೆಯ ಅಧ್ಯಕ್ಷರಾದ ಪ್ರಸಾದ್ ಕೆ. ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಯೋಧ್ಯಾ ಕರಸೇವಕರಾದ ಯಶೋಧ ಪ್ರಭು ಏನಡ್ಕ ಪೆರುವಾಜೆ, ರಮೇಶ್ ಕಲ್ಲೂರಾಯ ಮಂಜುನಾಥ ನಗರ ಪಾಲ್ತಾಡಿ ಹಾಗೂ ನವೀನ್ ರೈ ಕುಂಜಾಡಿ ಪಾಲ್ತಾಡಿ ಇವರುಗಳನ್ನು ಸನ್ಮಾನಿಸಲಾಯಿತು.
ವಿಶ್ವ ಹಿಂದೂ ಪರಿಷತ್ ಭಜರಂಗದಳದ ನೂತನ ಛತ್ರಪತಿ ಶಾಖೆ ಮುಕ್ಕೂರು – ಕುಂಡಡ್ಕ ಇದರ ಅಧ್ಯಕ್ಷರಾಗಿ ಜಯಂತ ಕುಂಡಡ್ಕ, ಉಪಾಧ್ಯಕ್ಷರಾಗಿ ಐತಪ್ಪ ಕಾನಾವು, ಕಾರ್ಯದರ್ಶಿಯಾಗಿ ಕಿರಣ್ ಚಾಮುಂಡಿಮೂಲೆ,
ಸಹ ಕಾರ್ಯದರ್ಶಿಯಾಗಿ ಮೋಹಿತ್ ಕುಮಾರ್, ಸತ್ಸಂಗ ಪ್ರಮುಖ್ ಆಗಿ ಅಶೋಕ್ ರೈ ಪೂವಾಜೆ, ಸಂಯೋಜಕರಾಗಿ ಗುರುಪ್ರಸಾದ್ ಕುಂಡಡ್ಕ ,
ಸಹ ಸಂಯೋಜಕರಾಗಿ ರಮೇಶ್ ಕುಂಡಡ್ಕ,
ಗೋ ರಕ್ಷಾ ಪ್ರಮುಖ್ ಆಗಿ ಪ್ರಸಾದ್ ಕುಂಡಡ್ಕ ಮತ್ತು ಆನಂದ ಜಲ್ಪನೆ, ಸುರಕ್ಷಾ ಪ್ರಮುಖ್ ಆಗಿ ವಾಸು ಕುಂಡಡ್ಕ,
ಅಖಾಡ ಪ್ರಮುಖ್ ಆಗಿ ವಿಶ್ವನಾಥ ಕಂಪ,
ವಿದ್ಯಾರ್ಥಿ ಪ್ರಮುಖ್ ಆಗಿ ಜನಿತ್ ಸಂಕೇಶ,
ಸಾಪ್ತಾಯಿಕ ಮಿಲನ್ ಆಗಿ ಸತೀಶ್ ಕುಂಡಡ್ಕ ಆಯ್ಕೆಯಾದರು. ಕಾರ್ಯಕ್ರಮವನ್ನು ಶೃತಕೀರ್ತಿ ಪ್ರಾರ್ಥಿಸಿ, ಶರತ್ ನೀರ್ಕಜೆ ಸ್ವಾಗತಿಸಿ, ಹರೀಶ್ ಕಲ್ಲಪನೆ
ನಿರೂಪಿಸಿದರು. ನಿತಿನ್ ಕಾನಾವು ವಂದನಾರ್ಪಣೆಗೈದರು.