Ad Widget

ಸಮಾಜದಲ್ಲಿ ಮಹಿಳೆಯರು ಸಾಮಾಜಿಕ ಬಲಾಢ್ಯತೆಯನ್ನು ಸಾಧಿಸಬೇಕು – ಯಶೋಧ ರಾಮಚಂದ್ರ


ಭಾರತೀಯ ಜನತಾ ಪಕ್ಷ ಶಕ್ತಿ ಕೇಂದ್ರ ಸಂಪಾಜೆ ಕೊಡಗು, ಮಹಿಳಾ ಮೋರ್ಚಾ ಸಂಪಾಜೆ ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳಾ ಜಾಗೃತಿ ಸಮಾವೇಶವು ಸಂಪಾಜೆಯ ಕೊಯನಾಡು ಗಣೇಶ ಕಲಾ ಮಂದಿರದಲ್ಲಿ ಅ.18 ರಂದು ಸಭೆ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೋಹನಾಂಗಿ ಕಂಜಿಪಿಲಿ, ಅಧ್ಯಕ್ಷರು ಮಹಿಳಾ ಮೋರ್ಚಾ ಸಂಪಾಜೆ, ಮುಖ್ಯ ಅತಿಥಿಗಳಾಗಿ ಯಶೋಧ ರಾಮಚಂದ್ರ, ನಿವೃತ್ತ ಪ್ರಾಂಶುಪಾಲರು, ಸುಳ್ಯ ಹಾಗೂ ರಮಾದೇವಿ ಬಾಲಚಂದ್ರ ಕಳಗಿ ಉಪಸ್ಥಿತರಿದ್ದರು. ಲೀಲಾವತಿ ಕಲಾಯಿ ಮತ್ತು ರಂಜಿನಿ ಪೆಲತಡ್ಕ ಇವರ ಪ್ರಾರ್ಥನೆಯೊಂದಿಗೆ ಮೊದಲ್ಗೊಂಡು ಪ್ರಾಸ್ತಾವಿಕವಾಗಿ ರಮಾದೇವಿ ಬಾಲಚಂದ್ರ ಕಳಗಿ ಮಾತನಾಡಿದರು. ಪ್ರಧಾನ ಭಾಷಣದಲ್ಲಿ ಶ್ರೀಮತಿ ಯಶೋಧ ರಾಮಚಂದ್ರ ರವರು ಸಮಾಜದಲ್ಲಿ ಮಹಿಳಾ ಸಬಲೀಕರಣ ಮತ್ತು ಮಹಿಳೆಯರ ಪಾತ್ರದ ಬಗ್ಗೆ ಮಾತನಾಡಿದರು, “ಸಮಾಜದಲ್ಲಿ ಮಹಿಳೆಯರು ಸಾಮಾಜಿಕ ಬಲಾಢ್ಯತೆಯನ್ನು ಸಾಧಿಸಬೇಕು ಹಾಗೂ ಸಾಧನೆಗಾಗಿ ರಾಜಕೀಯವಾಗಿ, ಬೌದ್ದಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಒಂದು ಹೆಣ್ಣು ತನ್ನನ್ನು ತಾನು ತೊಡಗಿಸಿಕೊಳ್ಳಬೇಕು” ಎಂದು ಮಹಿಳೆಯರನ್ನು ಪ್ರೋತ್ಸಾಹಿಸಿದರು. ಸಭೆಯಲ್ಲಿ ಗಣ್ಯರನ್ನು ಪುಷ್ಪಾವತಿ ವಿಶ್ವನಾಥ್ ಸ್ವಾಗತಿಸಿ,ಯಮುನಾ ಗಿರೀಶ್ ನಿರೂಪಿಸಿ, ವಾಣಿ ಜಗದೀಶ್ ಕೆದಂಬಾಡಿ ವಂದಿಸಿದರು, ಸಭೆಯಲ್ಲಿ ಬಿ.ಜೆ.ಪಿ ಶಕ್ತಿ ಕೇಂದ್ರದ ಸರ್ವ ಸದಸ್ಯರುಗಳು, ಸಂಘ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ವಿವಿಧ ಸ್ತ್ರೀ ಶಕ್ತಿ ಗುಂಪಿನ ಸದಸ್ಯರುಗಳು, ಗ್ರಾಮ ಪಂಚಾಯತ್ ಸಂಭಾವಿತ ಅಭ್ಯರ್ಥಿಗಳು, ಪಕ್ಷದ ಹಿರಿಯರು, ಮಹಿಳಾ ಮೋರ್ಚಾ ಪ್ರತಿನಿಧಿಗಳು, ಬಿಜೆಪಿ ಮಹಿಳಾ ಕಾರ್ಯಕರ್ತರು, ಯುವ ಮೋರ್ಚಾ ಸದಸ್ಯರುಗಳು, ಬೂತ್ ಸಮಿತಿ ಅಧ್ಯಕ್ಷರು, ಕಾರ್ಯದರ್ಶಿ, ಸರ್ವ ಸದಸ್ಯರುಗಳು ಹಾಗೂ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
ದೇಶ ವ್ಯಾಪಿಸಿದ ಕೊರೊನಾ ವೈರಸ್ ನಿಂದಾಗಿ ಸಾಮಾಜಿಕ ಅಂತರ ಮತ್ತು ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿ ವರ್ಗದವರಿಂದ ಮುಂಜಾಗ್ರತಾ ಕ್ರಮವನ್ನು ವಹಿಸಿದ್ದರು.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!