Ad Widget

ಕೊಲ್ಲಮೊಗ್ರ ಜಾಲುಮನೆ ಕಿರುಸೇತುವೆ ತಾ.ಪಂ. ಸದಸ್ಯ ಉದಯ ಕೊಪ್ಪಡ್ಕ ನೇತೃತ್ವದಲ್ಲಿ ದುರಸ್ತಿ

ಕೊಲ್ಲಮೊಗ್ರ ದಿಂದ ಜಾಲುಮನೆ ಸಂಚರಿಸುವ ಕಿರುಸೇತುವೆ ಇತ್ತೀಚೆಗೆ ಸುರಿದ ಭಾರಿ ಮಳೆಗೆ ಸೇತುವೆಯ ಒಂದು ಬದಿಯ ಮಣ್ಣು ಕುಸಿತಗೊಂಡು ಸಂಚಾರಕ್ಕೆ ತಡೆಯಾಗಿತ್ತು. ಕೂಡಲೇ ಸಮಸ್ಯೆಗೆ ಸ್ಪಂದಿಸಿದ ಕೊಲ್ಲಮೊಗ್ರು ಬಿ.ಜೆ.ಪಿಯ ಕಾರ್ಯಕರ್ತರು ಮತ್ತು ಮುಖಂಡರು ತಾಲೂಕು ಪಂಚಾಯತ್ ಸದಸ್ಯ ಉದಯ ಕೊಪ್ಪಡ್ಕರವರಿಗೆ ತಿಳಿಸಿ ಶೀಘ್ರ ದುರಸ್ತಿ ಗೆ ಮನವಿ ಮಾಡಿದ್ದರು.

. . . . . . . . .

ಕೂಡಲೇ ಸ್ಪಂದಿಸಿ ಸ್ಥಳಕ್ಕೆ ಭೇಟಿ ನೀಡಿದ ತಾ.ಪಂ ಸದಸ್ಯ ಉದಯ ಕೊಪ್ಪಡ್ಕ ವಾರದೊಳಗೆ ತಾತ್ಕಾಲಿಕ ದುರಸ್ತಿ ಕಾರ್ಯವನ್ನು ಮಾಡಿ ಸೇತುವೆಯ ಸಂಪೂರ್ಣ ದುರಸ್ತಿ ಬಗ್ಗೆ ಸಂಬಂಧಪಟ್ಟವರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇಂದು ಶರತ್ ಕಲ್ಲೇಮಠ ಅವರ ಸಾರಥ್ಯದಲ್ಲಿ ದುರಸ್ತಿ ಕಾರ್ಯ ಮಾಡಲಾಯಿತು. ದುರಸ್ತಿ ಕಾರ್ಯದ ಸಂಪೂರ್ಣ ವೆಚ್ಚವನ್ನು ಬಿ.ಜೆ.ಪಿ ಕಾರ್ಯಕರ್ತರು ಮತ್ತು ಮುಖಂಡರು ಭರಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಮುಖರಾದ ತಾ.ಪಂ ಸದಸ್ಯ ಉದಯ ಕೊಪ್ಪಡ್ಕ ಉದಯ ಶಿವಾಲ, ತೀರ್ಥರಾಮ ದೋಣಿಪಳ್ಳ, ನಾರಾಯಣ ಗೌಡ ಜಾಲುಮನೆ, ಗುರುಪ್ರಸಾದ್ ನಿಡುಬೆ ಮತ್ತು ಪಲಾನುಭವಿಗಳು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading