
ಸುಳ್ಯ ತಾಲೂಕು ವಿಕಲಚೇತನರ ಎಂ ಆರ್ ಡಬ್ಲ್ಯೂ ಹಾಗೂ ವಿ ಆರ್ ಡಬ್ಲ್ಯೂ ಪರಿಶೀಲನಾ ಸಭೆ ಅಕ್ಟೋಬರ್ 17ರಂದು ಸುಳ್ಯ ತಾ ಪಂ ಸಭಾಭವನದಲ್ಲಿ ನಡೆಯಿತು.ದ ಕ. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಯಮುನಾ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆ ಯಲ್ಲಿ ಸಿಡಿಪಿಒ ರಶ್ಮಿ, ಯು.ಆರ್.ಡಬ್ಲ್ಯೂ ಚಂದ್ರಶೇಖರ, ನಗರ ಪಂಚಾಯತ್ ಯು.ಆರ್.ಡಬ್ಲ್ಯೂ. ಪ್ರವೀಣ್ ನಾಯಕ್ ಸುಳ್ಯ, ತಾ ಪಂ ಅಧಿಕಾರಿ ಹರೀಶ್, ಜಿ ಪಂಚಾಯತ್ ನ ಸೂರಜ್, ಪುಟ್ಟಣ್ಣ ವಿ. ಮತ್ತು ತಾಲೂಕಿನ ಎಲ್ಲ ವಿ ಆರ್ ಡಬ್ಲ್ಯೂ ಪ್ರತಿನಿಧಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿಕಲಚೇತನರಿಗೆ ವಿಶೇಷ ಗುರುತಿನ ಚೀಟಿ ಯುಡಿಐಡಿ ಕಾರ್ಡ್ ನ್ನು ಯಮುನಾ ರವರು ವಿತರಿಸಿದರು. ಚಂದ್ರಶೇಖರ ಸ್ವಾಗತಿಸಿ. ಪ್ರವೀಣ್ ನಾಯಕ್ ವಂದಿಸಿದರು.