
ಕೊಲ್ಲಮೊಗ್ರು ಗ್ರಾಮದ ಜಾಲುಮನೆ ಸಂಪರ್ಕಿಸುವ ಜಾಲುಮನೆ ಕಿರು ಸೇತುವೆ ಭಾರಿ ಮಳೆಗೆ ಕುಸಿತಗೊಂಡಿದೆ. ಸಂಪರ್ಕ ಕಡಿತಗೊಂಡಿದೆ. ವಿಷಯ ತಿಳಿದು ಸ್ಥಳಕ್ಕೆ ನೀಡಿದ ಮಾಜಿ ತಾಪಂ ಸದಸ್ಯ ಪಿ ಸಿ ಜಯರಾಮ್ ಸೇತುವೆ ವೀಕ್ಷಿಸಿ ಸಮಸ್ಯೆ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರೆ.ಈ ಬಗ್ಗೆ ಅವರು ಕೂಡಲೇ ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಸೇತುವೆ ಕುಸಿತದಿಂದ ಸುಮಾರು 40 ಮನೆಗಳ ಸಂಪರ್ಕ ಕಡಿತಗೊಂಡಿದೆ. ಈ ಸೇತುವೆ ಸುಮಾರು 15 ವರ್ಷಗಳ ಹಿಂದೆ ಎಂ.ಎಲ್.ಸಿ. ಪ್ರತಾಪ್ ಚಂದ್ರ ಶೆಟ್ಟಿಯವರ ಅನುದಾನ ಹಾಗೂ ಮಡಪ್ಪಾಡಿ ಗ್ರಾ.ಪಂ. ಮತ್ತು ತಾ.ಪಂ.ಅನುದಾನದಲ್ಲಿ ನಿರ್ಮಾಣಗೊಂಡಿತ್ತು. ಈ ವೇಳೆ ಮಿತ್ರದೇವ ಮಡಪ್ಪಾಡಿ, ಈಶ್ವರ ಜಾಲುಮನೆ, ತೀರ್ಥರಾಮ ದೋಣಿಪಳ್ಳ ಮತ್ತಿತರರು ಉಪಸ್ಥಿತರಿದ್ದರು.