
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮ ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಸ್ನೇಹ ಸ್ತ್ರೀ ಶಕ್ತಿ ಸಂಘ ಅಂಗನವಾಡಿ ಕೇಂದ್ರ ಬಾಲ ವಿಕಾಸ ಸಮಿತಿ, ಪ್ರೀತಿ ಸ್ತ್ರೀ ಶಕ್ತಿ ಸಂಘ ಬೊಳುಬೈಲು ಇವರ ಆಶ್ರಯದಲ್ಲಿ ಐ ಸಿ ಡಿ ಎ ಸ್ ಮತ್ತು ಗಾಂಧಿ ಜಯಂತಿ ಕಾರ್ಯ ಕ್ರಮ ಬೊಳುಬೈಲು ಅಂಗನವಾಡಿ ಕೇಂದ್ರದಲ್ಲಿ ಅ.2ರಂದು ನಡೆಯಿತು.
ಬಾಲ ವಿಕಾಸ ಸಮಿತಿ ಅಧ್ಯಕ್ಷ ಸವಿತ ಪಿಲಿಕೋಡಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕನಕಮಜಲು ಸೊಸೈಟಿಯ ಮಾಜಿ ಉಪಾಧ್ಯಕ್ಷರಾದ ಶ್ರೀಮತಿ ಗೀತಾ ಗೋಪಿನಾಥ್ ಬೊಳುಬೈಲು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಬೊಳುಬೈಲು ಸ.ಕಿ.ಪ್ರಾ.ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕೋಮಲ ಸಹಶಿಕ್ಷಕಿ ಶ್ರೀಮತಿ ರಾಧಮ್ಮ ಬ್ಲಾಕ್ ಸೊಸೈಟಿ ಕಾರ್ಯದರ್ಶಿ ಪ್ರಸನ್ನ ಕುಮಾರಿ ಸ್ನೇಹ ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಸುಮತಿ ದಿವಾಕರ, ಸಂಜೀವಿನಿ ಸಂಘದ ಎಲ್ ಪಿ ಆರ್ ಪಿ ಅಧ್ಯಕ್ಷೆ ಚಂದ್ರಕಲಾ ಅಡ್ಕಾರು, ಕನಕಮಜಲು ಸೊಸೈಟಿ ನಿರ್ದೇಶಕ ಕರುಣಾಕರ ರೈ ಕುಕ್ಕಂದೂರು, ಆಶಾ ಕಾರ್ಯಕರ್ತೆ ಭಾರತಿ, ಕಿಶೋರಿ ಸಂಘ ಅಧ್ಯಕ್ಷೆ ಕುಮಾರಿ ಗೌತಮಿ ಉಪಸ್ಥಿತರಿದ್ದರು. ರಶ್ಮಿ ಮಹೇಶ್ ಕುತ್ಯಾಳ ಸ್ವಾಗತಿಸಿ ನಿತ್ಯಾನಂದ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅಂಗನವಾಡಿ ಕೇಂದ್ರದ ಪರಿಸರದಲ್ಲಿ ಸ್ವಚ್ಛತೆ ಮತ್ತು ಪೌಷ್ಟಿಕ ಕೈ ತೋಟವನ್ನು ಮಾಡಲಾಯಿತು.