Ad Widget

ಬೆಳ್ಳಾರೆ : ಅಜಪಿಲ ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸಮಿತಿ – ಅಧ್ಯಕ್ಷ ಅಮೃತ್ ಕುಮಾರ್ ಕಿಲಂಗೋಡಿ – ಕಾರ್ಯದರ್ಶಿಯಾಗಿ ಸತೀಶ್ ಕುಮಾರ್ ಕಿಲಂಗೋಡಿ

ಅಜಪಿಲ ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸಮಿತಿ ಬೆಳ್ಳಾರೆ ಇದರ 2019-20ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಶ್ರೀ ಅಮೃತ್ ಕುಮಾರ್ ಕಿಲಂಗೋಡಿ ಇವರ ಅಧ್ಯಕ್ಷತೆಯಲ್ಲಿ ಸ್ನೇಹಿತರ ಕಲಾ ಸಂಘ ( ರಿ . ) ಬೆಳ್ಳಾರೆ ಇದರ ಸಭಾಂಗಣದಲ್ಲಿ ಜರುಗಿತು. ಈ ಸಭೆಯಲ್ಲಿ ವಾರ್ಷಿಕ ವರದಿಯನ್ನು ಸಂಘದ ಕಾರ್ಯದರ್ಶಿ ಶ್ರೀ ಸತೀಶ್ ಕುಮಾರ್ ಕಿಲಂಗೋಡಿ ಮಂಡಿಸಿದರು. ಸಭೆಯ ವರದಿಯ ಬಗ್ಗೆ ವಿಸ್ತೃತವಾಗಿ ಚರ್ಚಿಸಿ ಈ ವರದಿಯನ್ನು ಧ್ವನಿಮತದಿಂದ ಅಂಗೀಕರಿಸಲಾಯಿತು. ನಂತರ ವಾರ್ಷಿಕ ಜಮಾ ಖರ್ಚು ಲೆಕ್ಕಪತ್ರವನ್ನು ಸಂಘದ ಕೋಶಾಧಿಕಾರಿ ಶ್ರೀ ವಸಂತ ಉಲ್ಲಾಸ್ ಮಂಡಿಸಿದರು . ಸಭೆಯಲ್ಲಿ ಈ ಲೆಕ್ಕಪತ್ರವನ್ನು ಧ್ವನಿಮತದಿಂದ ಅಂಗೀಕರಿಸಲಾಯಿತು. ನಂತರ ಗತ ವರ್ಷದ ಕಾರ್ಯಕ್ರಮಗಳ ಅವಲೋಕನ ನಡೆಸಿ, ಮುಂದಿನ ವರ್ಷದ ಕಾರ್ಯಕ್ರಮವನ್ನು ಯೋಜಿಸಿ ಅನುಮೋದನೆ ನೀಡಲಾಯಿತು. ವೇದಿಕೆಯಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಆನಂದ ರೈ ಪಡ್ಕಜೆ ಹಾಗೂ ನಿಕಟಪೂವಾಧ್ಯಕ್ಷರಾದ ಶ್ರೀ ಚಂದ್ರಶೇಖರ ಪನ್ನೆ ಉಪಸ್ಥಿತರಿದ್ದರು.

. . . . . . . . .

2020-21ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಆನಂದ ರೈ ಪುಡ್ಕಜೆ, ನಿಕಟಪೂರ್ವಾಧ್ಯಕ್ಷರಾಗಿ ಶ್ರೀ ಚಂದ್ರಶೇಖರ ಪನ್ನೆ, ಅಧ್ಯಕ್ಷರಾಗಿ ಶ್ರೀ ಅಮೃತ್ ಕುಮಾರ್ ಕಿಲಂಗೋಡಿ, ಕಾರ್ಯದರ್ಶಿಯಾಗಿ ಶ್ರೀ ಸತೀಶ್ ಕುಮಾರ್ ಕಿಲಂಗೋಡಿ , ಕೋಶಾಧಿಕಾರಿಯಾಗಿ ಶ್ರೀ ವಸಂತ ಉಲ್ಲಾಸ್ , ಉಪಾಧ್ಯಕ್ಷರಾಗಿ ವಸಂತ ಪಡ್ಪು , ಜತೆ ಕಾರ್ಯದರ್ಶಿಯಾಗಿ ಶಶಿಧರ ಮಣಿಯಾಣಿ ಬೀಡು ಇವರನ್ನು ಆಯ್ಕೆ ಮಾಡಲಾಯಿತು. ಶಿವರಾಮ ನಾಯಕ್ ಪನ್ನೆ , ಸುಪ್ರೀತ್ ಬಸ್ತಿಗುಡ್ಡೆ , ಆನಂದ ಗೌಡ ಪಡ್ಪು , ಚಂದ್ರಶೇಖರ ಗೌಡ ಬಸ್ತಿಗುಡ್ಡೆ , ಉಮೇಶ್ ಕಜೆ, ಪದ್ಮನಾಭ ಚೂಂತಾರು ಇವರುಗಳನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಚುನಾವಣಾ ಅಧಿಕಾರಿಯಾಗಿ ನಿಕಟ ಪೂರ್ವಾಧ್ಯಕ್ಷ ಶ್ರೀ ಚಂದ್ರಶೇಖರ ಪನ್ನೆ ಕಾರ್ಯನಿರ್ವಹಿಸಿದರು. ಕೋಶಾಧಿಕಾರಿ ವಸಂತ ಉಲ್ಲಾಸ್ ಸ್ವಾಗತಿಸಿ, ಉಪಾಧ್ಯಕ್ಷ ವಸಂತ ಪಡ್ಪು ವಂದಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading