ರೋಟರಿ ಕ್ಲಬ್ ಸುಳ್ಯ, ಭಾರತೀಯ ವೈದ್ಯಕೀಯ ಸಂಘ, ರೋಟರಿ ಸುಳ್ಯಸಿಟಿ ನೇತೃತ್ವದಲ್ಲಿ ನೇತ್ರದಾನ ನೋಂದಾವಣೆ, ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಸುಳ್ಯ ಪ್ರಸಾದ್ ನೇತ್ರಾಲಯ ಮತ್ತು ಕೆಲವು ಟ್ರಸ್ಟ್ ಗಳ ಜಂಟಿ ಆಶ್ರಯದಲ್ಲಿ ರೋಟರಿ ಸಭಾಭವನದಲ್ಲಿ ಅ. 11 ರಂದು ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಗುರುರಾಜ್ ವೈಲಾಯ ವಹಿಸಿದ್ದರು. ಮುಖ್ಯ ಅತಿಥಿ ಗಳಾಗಿ ಐ.ಎಂ.ಎ ಅಧ್ಯಕ್ಷ ಡಾ.ಕೃಷ್ಣ ಭಟ್ ಭಾಗವಹಿಸಿದರು. ಪ್ರಸಾದ್ ನೇತ್ರಾಲಯದ ವೈದ್ಯರಾದ ರಮ್ಯ ನೇತ್ರದಾನ ಮತ್ತು ನೇತ್ರ ತಪಾಸಣೆಯ ಕುರಿತು ಮಾಹಿತಿ ನೀಡಿದರು. ಶಿಬಿರವನ್ನು ಡಾ. ರಮ್ಯಾ ಹಾಗೂ ಸಿಬ್ಬಂದಿ ವರ್ಗದವರು ನಡೆಸಿಕೊಟ್ಟರು.
ಶಿಬಿರದಲ್ಲಿ 70 ಕ್ಕೂ ಅಧಿಕ ಜನರು ಇದರ ಸದುಪಯೋಗ ವನ್ನು ಪಡೆದುಕೊಂಡರು. 35 ಜನರು ತಮ್ಮ ಕಣ್ಣು ದಾನ ಮಾಡಲು ನೋಂದಾವಣೆ ಮಾಡಿಕೊಂಡರು. ಶಿಬಿರವನ್ನು ಯಶಸ್ವಿಗೊಳಿಸಿದ ಸರ್ವರಿಗೂ ರೋಟರಿ ಸುಳ್ಯ ಅಧ್ಯಕ್ಷ ರೊ. ಡಾ. ಗುರುರಾಜ್ ವೈಲಾಯ ಮತ್ತು ಕಾರ್ಯದರ್ಶಿ ರೊ.ಲತಮಧುಸೂದನ್ ಅಭಿನಂದನೆ ಸಲ್ಲಿಸಿದರು. ರೋಟರಿ ಸಿಟಿ ಅಧ್ಯಕ್ಷ ಗುರು ವಿಕ್ರಂ ಸ್ವಾಗತಿಸಿ ವಂದಿಸಿದರು.