ಅ.2 ರಂದು ಗಾಂಧಿ ಜಯಂತಿ ಆಚರಣೆ ಕಾರ್ಯ ಕ್ರಮದಲ್ಲಿ ಸ್ನೇಹ ಸ್ತ್ರೀ ಶಕ್ತಿ ಸಂಘದ ವತಿಯಿಂದ ಸಂಘದ ಸದಸ್ಯರ ಮಕ್ಕಳಲ್ಲಿ ಹೆಚ್ಚು ಅಂಕಗಳಿಸಿದ ಮಕ್ಕಳು ಗಣೇಶ್ ರೈ ಹಾಗೂ ಶ್ರೀಮತಿ ಆಶಾ ಕುಕ್ಕಂದೂರು ದಂಪತಿಗಳ ಪುತ್ರ ಚಿಂತನಾ ರೈ, ಪ್ರಸನ್ನ ಕುಮಾರಿ ಹಾಗೂ ಹೇಮಕರ ನೆಕ್ರಾಜೆ ದಂಪತಿಗಳ ಪುತ್ರ ಕಾರ್ತಿಕ್ ಏನ್. ಹೆಚ್, ಕರುಣಾಕರ ರೈ ಹಾಗೂ ಪದ್ಮಾವತಿ ದಂಪತಿಗಳ ಪುತ್ರಿ ಕೃತಿ ಇವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಕನಕಮಜಲು ಸೊಸೈಟಿಯ ಮಾಜಿ ಉಪಾಧ್ಯಕ್ಷರಾದ ಶ್ರೀಮತಿ ಗೀತಾ ಗೋಪಿನಾಥ್
ಬೊಳುಬೈಲು ಸ.ಕಿ.ಪ್ರಾ.ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕೋಮಲ ಸಹಶಿಕ್ಷಕಿ ಶ್ರೀಮತಿ ರಾಧಮ್ಮ ಬ್ಲಾಕ್ ಸೊಸೈಟಿ ಕಾರ್ಯದರ್ಶಿ ಪ್ರಸನ್ನ ಕುಮಾರಿ. ಬಾಲ ವಿಕಾಸ ಸಮಿತಿ ಅಧ್ಯಕ್ಷ ಸವಿತ ಪಿಲಿಕೋಡಿ , ಸ್ನೇಹ ಸ್ತ್ರೀ ಶಕ್ತಿ ಸಂಘದಅಧ್ಯಕ್ಷೆ ಸುಮತಿ ದಿವಾಕರ, ಸಂಜೀವಿನಿ ಸಂಘದ ಎಲ್ ಪಿ ಆರ್ ಪಿ ಅಧ್ಯಕ್ಷೆ ಚಂದ್ರಕಲಾ ಅಡ್ಕಾರು, ಕನಕಮಜಲು ಸೊಸೈಟಿ ನಿರ್ದೇಶಕ ಕರುಣಾಕರ ರೈ ಕುಕ್ಕಂದೂರು, ಆಶಾ ಕಾರ್ಯಕರ್ತೆ ಭಾರತಿ, ಕಿಶೋರಿ ಸಂಘ ಅಧ್ಯಕ್ಷೆ ಕುಮಾರಿ ಗೌತಮಿ ಉಪಸ್ಥಿತರಿದ್ದರು.