
ಸುಳ್ಯ ಪೇಟೆಯ ಎರಡು ಅಂಗಡಿಗಳಿಂದ ಕಳ್ಳತನ ನಡೆದ ಘಟನೆ ಕಳೆದ ರಾತ್ರಿ ನಡೆದಿದೆ. ಎಪಿಎಂಸಿ ಬಳಿಯ ಲೋಕೇಶ್ ಕೆರೆಮೂಲೆ ಹಾಗೂ ಯುವಜನ ಸಂಯುಕ್ತ ಮಂಡಳಿ ಬಳಿಯ ಅಂಗಡಿಗಳಿಂದ ಕಳ್ಳರು ದೋಚಿದ್ದಾರೆ. ಲೋಕೇಶ್ ರವರ ಅಂಗಡಿಯಿಂದ ಕಂಪ್ಯೂಟರ್,ಮೊಬೈಲ್, ಹಣ ಸೇರಿದಂತೆ ಸುಮಾರು 50 ಸಾವಿರ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ.