ರಾಷ್ಟ್ರೀಯ ವಿಪತ್ತು ತಡೆ ದಿನಾಚಣೆಯ ಅಂಗವಾಗಿ ಸುಬ್ರಮಣ್ಯ ವಲಯದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಿಪತ್ತು ನಿರ್ವಹಣೆ ಘಟಕದ ಶ್ರಮದಾನ ನಡೆಯಿತು.
ಕಟ್ಟ ದೇವಸ್ಥಾನದ ಆವರಣ ಸ್ವಚ್ಛತೆ ಹಾಗೂ ಮಳೆ ನೀರಿಗೆ ಹಾನಿಗೊಳಗಾಗಿದ್ದ ಕಟ್ಟ ಕೊಲ್ಲಮೊಗ್ರು ಸಂಪರ್ಕ ರಸ್ತೆಯ ಮೈಲಾ ಕಿರು ಸೇತುವೆ ಯನ್ನು ಸಂಚಾರ ಯೋಗ್ಯವನ್ನಾಗಿಸುವಲ್ಲಿ ಶ್ರಮಸೇವೆ ನಡೆಸಿದರು. ಸಂಯೋಜಕರಾದ ಸತೀಶ್ ಟಿ.ಎನ್., ಮಣಿಕಂಠ ಕಟ್ಟ, ವಲಯ ಮೇಲ್ವಚಾರಕ ಸೀತಾರಾಮ್, ಐನೆಕಿದು ಸೇವಾ ಪ್ರತಿನಿಧಿ ಹರ್ಷಿತಾ, ಹರಿಹರ ಸೇವಾ ಪ್ರತಿನಿಧಿ ರೇಖಾ, ಕೊಲ್ಲಮೊಗ್ರ ಸೇವಪ್ರತಿನಿಧಿ ಸಾವಿತ್ರಿ, ಹಾಗೂ ಘಟಕದ ಸ್ವಯಂ ಸೇವಕರು ಉಪಸ್ಥಿತರಿದ್ದರು.