ಅಂತರರಾಷ್ಟ್ರೀಯ ವಿಪತ್ತು ತಡೆ ದಿನಾಚರಣೆಯ ಅಂಗವಾಗಿ ಗುತ್ತಿಗಾರು ವಿಪತ್ತು ನಿರ್ವಹಣಾ ಘಟಕದಿಂದ ಇಂದು ಸ್ವಚ್ಚತಾ ಶ್ರಮದಾನ ನಡೆಸಲಾಯಿತು.
ಗುತ್ತಿಗಾರು ಸಾರ್ವಜನಿಕ ಶೌಚಾಲಯ ಸಂಪೂರ್ಣವಾಗಿ ಸ್ವಚ್ಚಗೊಳಿಸಿ ಸುತ್ತಲೂ ತುಂಬಿದ್ದ ಕಾಡನ್ನು ತೆಗೆಯಲಾಯಿತು. ಈ ಸಂದರ್ಭದಲ್ಲಿ
ವಿಪತ್ತು ನಿರ್ವಹಣೆ ಘಟಕದ ಸಂಯೋಜಕರಾದ ಅಚ್ಚುತ ಗುತ್ತಿಗಾರು, ಮೇಲ್ವಿಚಾರಕರಾದ ಸುಧೀರ್, ಸತೀಶ್ ಮೂಕಮಲೆ, ಲೋಹಿತ್ ಚೈಪೆ, ಜಯರಾಮ ಪೈಕ, ಮನೋಜ್ ಗುತ್ತಿಗಾರು, ವಸಂತ ಚತ್ರಪ್ಪಾಡಿ, ಚೇತನ್ ಗುತ್ತಿಗಾರು, ರಾಕೇಶ್ ಮೆಟ್ಟಿನಡ್ಕ, ಗಿರಿ ಚತ್ರಪ್ಪಾಡಿ ಮತ್ತು ದೀಕ್ಷಿತ್ ಪೈಕ ಅವರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.