Ad Widget

ಸಂಪತ್ ಹತ್ಯೆ ನಡೆದ ಶಾಂತಿನಗರದ ಮನೆಯವರಿಗೆ ಸೂಕ್ತ ಪರಿಹಾರ ಕಲ್ಪಿಸಿಕೊಡಲು ಸ್ಥಳೀಯ ನಿವಾಸಿ ಅಬ್ದುಲ್ ಖಾದರ್ ಆಗ್ರಹ

ಕಳೆದ ಕೆಲವು ದಿನಗಳ ಹಿಂದೆ ಶಾಂತಿನಗರ ಪದ್ಮನಾಭ ಎಂಬವರ ಮನೆಯಲ್ಲಿ ಹತ್ಯೆಗೀಡಾದ ಸಂಪತ್ ಕೊಲೆ ಪ್ರಕರಣದಲ್ಲಿ ಆರೋಪಿಗಳು ಈಗಾಗಲೇ ಪೊಲೀಸರ ಬಲೆಗೆ ಸಿಕ್ಕಿ ರುವುದಾಗಿ ತಿಳಿದುಬಂದಿದೆ. ಅವರ ಮೇಲೆ ಕಾನೂನು ಕ್ರಮಗಳು , ವಿಚಾರಣೆಗಳು ಎಲ್ಲವೂ ಸಂಬಂಧಪಟ್ಟ ಇಲಾಖೆಗಳ ವತಿಯಿಂದ ನಡೆಸಲಾಗುತ್ತದೆ. ಕೊಲೆ ನಡೆದ ಮನೆಯಲ್ಲಿ ಬಡ ದಂಪತಿಗಳು ತಮ್ಮ 4 ವರ್ಷದ ಪುಟ್ಟ ಮಗುವಿನೊಂದಿಗೆ ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಗರ್ಭಿಣಿ ಯಾಗಿರುವ ಮಹಿಳೆ ಪದ್ಮನಾಭ ರವರ ಪತ್ನಿ ಆ ಮನೆಯಲ್ಲಿ ಇರುವುದಕ್ಕೆ ಭಯಬೀತ ಗೊಳ್ಳುತ್ತಿದ್ದಾರೆ. ಕಾರಣ ಅವರ ಕಣ್ಣೆದುರಲ್ಲೇ ಸಂಪತ್ ನ ಕೊಲೆ ನಡೆದಿದ್ದು ಇನ್ನೂ ಅದರ ಶಾಕ್ ನಿಂದ ಅವರು ಹೊರ ಬರಲಿಲ್ಲ. ಕೊಲೆ ನಡೆದ ದಿನ ಮನೆಯವರು ಮತ್ತು ಕುಟುಂಬಸ್ಥರು ಸಂಬಂಧಪಟ್ಟ ಅಧಿಕಾರಿಗಳ ಮುಂದೆ ತಮ್ಮ ನೋವನ್ನು ಮತ್ತು ಸಮಸ್ಯೆಗಳನ್ನು ಹೇಳಿಕೊಂಡಾಗ ಅಧಿಕಾರಿಗಳು ಮತ್ತು ಸಂಪತ್ ನ ಮನೆಯವರು ಹಲವು ಭರವಸೆಗಳನ್ನು ನೀಡಿದ್ದರು. ಇದೀಗ ಬಡ ದಂಪತಿಗಳನ್ನು ಕೇಳುವವರು ಯಾರೂ ಇಲ್ಲದಂತಾಗಿದೆ. ಈಗಾಗಲೇ ಹಲವಾರು ದೇವಸ್ಥಾನಗಳಿಗೆ ಮತ್ತು ಅರ್ಚಕರ ಬಳಿ ತೆರಳಿ ತಮ್ಮ ಪರಿಹಾರಕ್ಕೆ ದಾರಿ ಹುಡುಕುತ್ತಿದ್ದು ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿರುವ ಕುಟುಂಬಕ್ಕೆ ಇದೀಗ ಅನಾವಶ್ಯಕ ಒರೆಯಾಗಿ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು , ಮತ್ತು ಸಂಪತ್ ನ ಕುಟುಂಬದ ಸದಸ್ಯರು ನೀಡಿರುವ ಭರವಸೆಯನ್ನು ಆದಷ್ಟು ಶೀಘ್ರದಲ್ಲಿ ಪೂರೈಸಬೇಕಾಗಿ ಸ್ಥಳೀಯ ನಿವಾಸಿ ಅಬ್ದುಲ್ ಖಾದರ್ ಶಾಂತಿನಗರ ಆಗ್ರಹಿಸಿದ್ದಾರೆ.

. . . . .
ಅಬ್ದುಲ್ ಖಾದರ್ (ಅಂದು) ಶಾಂತಿನಗರ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!