ಭಾರತೀಯ ಜನತಾ ಪಾರ್ಟಿ ಪೆರುವಾಜೆ, (ಪೆರುವಾಜೆ, ಮುಕ್ಕೂರು, ಮುರ್ಕೆತ್ತಿ )ಕುಟುಂಬ ಮಿಲನ ಕಾರ್ಯಕ್ರಮವು ಪೆರುವಾಜೆಯ ಜೆ .ಡಿ. ಆಡಿಟೋರಿಯಂನಲ್ಲಿ ಅ.11 ರಂದು ಜರುಗಿತು. ಶಾಸಕ ಎಸ್.ಅಂಗಾರರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಕುಟುಂಬ ಮಿಲನದ ಪ್ರಾಮುಖ್ಯತೆ ಮತ್ತು ಬಿಜೆಪಿ ನಡೆದು ಬಂದ ಹಾದಿಯನ್ನು ತಿಳಿಸಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು ಮತ್ತು ಸುಳ್ಯ ಪ್ರಭಾರಿ ರಾಧಾಕೃಷ್ಣ ರೈ ಬೂಡಿಯಾರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಭಾರತದ ಪ್ರಸ್ತುತ ಸ್ಥಿತಿಯ ಅವಲೋಕನಗೈದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರಕಾರದ ಹಲವು ಯೋಜನೆ ಮತ್ತು ಅವುಗಳ ಮಹತ್ವವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಎಸ್.ಟಿ. ಮೋರ್ಚಾದ ನೂತನ ಕಾರ್ಯದರ್ಶಿ ರಮೇಶ್ ಮಠತ್ತಡ್ಕ , ತಾಲೂಕು ಯುವ ಮೋರ್ಚಾ ಸದಸ್ಯ ನವೀನ್ ಬೊಟ್ಟತ್ತಾರು, ತಾಲೂಕು ಮಂಡಲ ಕಾರ್ಯಕಾರಿಣಿ ಸದಸ್ಯ ಶಶಿ ನೆಲ್ಲಿಕುಮೇರು ಇವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಪೆರುವಾಜೆ ಗ್ರಾಮದ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಪದ್ಮನಾಭ ಶೆಟ್ಟಿ ಪೆರುವಾಜೆ, ಜಯಪ್ರಕಾಶ್ ರೈ ಪೆರುವಾಜೆ, ನಾರಾಯಣ ಕೊಂಡೆಪ್ಪಾಡಿ, ರೂಪಾನಂದ ಮುಕ್ಕೂರು, ಪ್ರಸಾದ್ ಬೊಟ್ಟತ್ತಾರು, ವಿಶ್ವನಾಥ ಬೊಟ್ಟತ್ತಾರು, ಲೋಕನಾಥ್ ಶೆಟ್ಟಿ, ಚಿದಾನಂದ್ ಬಜ, ದಾಮೋದರ ನಾಯ್ಕ್ ನಾಗನಮಜಲು ಉಪಸ್ಥಿತರಿದ್ದರು. ಶಿವಪ್ರಸಾದ್ ಪೆರುವಾಜೆ ಕಾರ್ಯಕ್ರಮ ನಿರೂಪಿಸಿದರು.