ಶ್ರೀ ಕ್ಷೇ.ಧ.ಗ್ರಾ. ಯೋ, ಬಿ.ಸಿ.ಟ್ರಸ್ಟ್ ಬಳ್ಪ ಒಕ್ಕೂಟ, ಹಿಂದೂ ಜಾಗರಣ ವೇದಿಕೆ ಬಳ್ಪ, ವರ್ತಕರ ಸಂಘ ಬಳ್ಪ, ಇವುಗಳ ಜಂಟಿ ಆಶ್ರಯದಲ್ಲಿ ಅ.11 ರಂದು ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ವಿಕ್ರಮ ಯುವಕ ಮಂಡಲದ ಅಧ್ಯಕ್ಷ ಪ್ರಸನ್ನ ವೈ.ಟಿ. ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ವಲಯದ ಮೇಲ್ವಿಚಾರಕ ಸೀತಾರಾಮ ಬಳ್ಪ, ಒಕ್ಕೂಟದ ಅಧ್ಯಕ್ಷ ಮೋಹನ್ ಬಿ.ಕೆರೆ, ಹಿಂದೂ ಜಾಗರಣಾ ವೇದಿಕೆಯ ಅಧ್ಯಕ್ಷ ಪ್ರಖ್ಯಾತ್ ರೈ ಬಳ್ಪ, ಒಕ್ಕೂಟದ ಸ್ಥಾಪಕಾಧ್ಯಕ್ಷ ಪುಟ್ಟಣ್ಣ ಕೊರಪ್ಪಣೆ, ಪದಾಧಿಕಾರಿಗಳು ಉಪಸ್ಥಿತರಿದ್ದರು. ಬಳ್ಪ ಸೇವಾ ಪ್ರತಿನಿಧಿ ಭವ್ಯ ಎ.ಕೆ. ಸ್ವಾಗತಿಸಿ, ವಂದಿಸಿದರು.
ವಿಕ್ರಮ ಯುವಕ ಮಂಡಲದ ಎದುರುಗಡೆ, ಆರೋಗ್ಯ ಕೇಂದ್ರ, ಧರ್ಮಶಾಸ್ತವು ಭಜನಾ ಮಂಡಳಿ , ಹಾಲು ಉತ್ಪಾದಕರ ಸಂಘದ ಎದುರುಗಡೆ, ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಆವರಣಗಳನ್ನು ಸ್ವಚ್ಚಗೊಳಿಸಲಾಯಿತು.