Ad Widget

ಸುಳ್ಯ : ಸಂಪತ್ ಹಂತಕರ ಬಂಧನ…!ಆಪ್ತರಿಂದಲೆ ಕೊಲೆ

ಕೊಲೆಯಾದ ಸಂಪತ್

ಕಳೆದ ವರ್ಷ ಮಾರ್ಚ್ ನಲ್ಲಿ ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಅವರನ್ನು ಅಪಘಾತದಲ್ಲಿ ಕೊಲೆ ಮಾಡಿಸಿದ ಕೇಸ್ ನ ಪ್ರಮುಖ ಆರೋಪಿ ಸಂಪತ್ ನನ್ನು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿ ಪ್ರಮುಖ ಆರೋಪಿಗಳನ್ನು ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ನೇತೃತ್ವದ ಹಾಗೂ ಮಂಗಳೂರು ಡಿಸಿಐಬಿ ಪೊಲೀಸರ ತನಿಖಾ ತಂಡ ಬಂಧಿಸಿರುವ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಬಂಧಿತ ಆರೋಪಿಗಳನ್ನು ಸಂಪತ್‌ ಅವರ ಆಪ್ತರಾಗಿದ್ದ ಮನು, ಕಾರ್ತಿಕ್, ಮಧು, ಶಿಶಿರ್ ಮತ್ತು ಬಿಪಿನ್ ಎಂದು ಗುರುತಿಸಲಾಗಿದೆ
ಸುಳ್ಯದ ಶಾಂತಿನಗರದಲ್ಲಿ ನಡೆದ ಕೊಲೆ ಪ್ರಕರಣದ ದಿನದಂದೇ ಅರಂತೋಡು ಸಮೀಪದ ಕಳುಬೈಲ್ ಎಂಬಲ್ಲಿ ಮನೀಶ್ ಬಾಬು ಗೌಡ ಅವರಿಗೆ ಸೇರಿದ ರಬ್ಬರ್ ತೋಟದಲ್ಲಿ ಹಸಿರು ಬಣ್ಣದ ಕ್ವಾಲಿಸ್ ಕಾರ್ ಪತ್ತೆಯಾಗಿತ್ತು. ಕೃತ್ಯ ನಡೆಸಲು ಬಂದ ದಿನ ಇದೇ ವಾಹನವನ್ನು ಬಳಸಿದ್ದರು ಎನ್ನಲಾಗಿದೆ. ಈ ಕುರಿತು ತನಿಖಾ ತಂಡ ತನಿಖೆ ನಡೆಸಲು ಆರಂಭಿಸಿದ್ದು ಕಲ್ಲುಗುಂಡಿ, ಸಂಪಾಜೆ ಸಮೀಪದ ಹಲವಾರನ್ನು ವಶಕ್ಕೆ ಪಡೆದು ವಿಚಾರಣೆಗೆ ಪೊಲೀಸರು ಒಳಪಡಿಸಿದ್ದರು. ಈ ನಡುವೆ ಕಲ್ಲುಗುಂಡಿ ನಿವಾಸಿ ಮನು ಸೇರಿದಂತೆ ಆತನ ಜೊತೆಗೆ ಇದ್ದ ಐದು ಮಂದಿ ಯುವಕರು ಕೊಲೆ ನಡೆದ ದಿನದಂದು ಮನೆಗೆ ಬಾರದೇ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು. ಈ ಎಲ್ಲಾ ಮಾಹಿತಿಗಳ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿದುಬಂದಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading