

ಸುಳ್ಯ ಪರಿವಾರಕಾನ ಗ್ರ್ಯಾಂಡ್ ಪರಿವಾರ್ ಬಳಿ ಅನುಗ್ರಹ ಮೋಟಾರ್ಸ್ ಸುಜುಕಿ ದ್ವಿಚಕ್ರ ವಾಹನದ ಶೋರೂಮ್ ಅ.9 ರಂದು ಶುಭಾರಂಭಗೊಂಡಿತು.ನೂತನ ಸಂಸ್ಥೆಯನ್ನು ಸುಜುಕಿ ಸೇಲ್ಸ್ ಏರಿಯಾ ವ್ಯವಸ್ಥಾಪಕ ಗುರು ಪ್ರಸಾದ್ ಉದ್ಘಾಟಿಸಿದರು.
ಸುಜುಕಿ ಸರ್ವಿಸ್ ಏರಿಯಾ ವ್ಯವಸ್ಥಾಪಕ ಕಿಲ್ಲನ್ ರಾಂಬರ್,ಅನಘ ಮೋಟಾರ್ಸ್ ವ್ಯವಸ್ಥಾಪಕ ನಿರ್ದೇಶಕ ಎನ್.ವೆಂಕಟ ಫಾಣಿ,ಸಂಸ್ಥೆಯ ನಿರ್ದೇಶಕಿಯವರ ತಂದೆಯವರಾದ ಈಶ್ವರ,ತಾಯಿ ಶಶಿಕಲಾ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಎನ್ ಬಿ,ಸಂಸ್ಥೆಯ ಅಡಳಿತ ನಿರ್ದೇಶಕಿ ಸಿಂಚನ ಎನ್.ಬಿ ದೀಪ ಬೆಳಗಿಸಿದರು.
ಸಂಸ್ಥೆಯ ಸರ್ವಿಸ್ ವಿಭಾಗವನ್ನು ನ್ಯಾಯವಾದಿ ಸತೀಶ್ಚಂದ್ರ ಉದ್ಘಾಟಿಸಿದರು
ಮದರ್ ತೆರೇಸಾ ಚರ್ಚ್ ನ ಧರ್ಮ ಗುರುಗಳಾದ .ಜೋಸೆಫ್ ಪುದುಕುಯಿಲ್ ರವರು ಪ್ರಥಮ ಗ್ರಾಹಕ ಗ್ರ್ಯಾಂಡ್ ಪರಿವಾರ್ ಪಾಲುದಾರ ಎಂ.ಕೆ ಲತೀಫ್ ರವರಿಗೆ ಸ್ಕೂಟರ್ ಕೀಯನ್ನು ಹಸ್ತಾಂತರಿಸಿದರು. ನಿವೃತ್ತ ಯೋಧ ನಾರಾಯಣ ಅರಂಬೂರು, ಬಶೀರ್ ಸಪ್ನಾ,ರಂಜನ್ ಪುತ್ತೂರು,ಎ.ಸಂಜೀವ ಅನುಗ್ರಹ ಪಾರೆಂಕಿ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ನಿರ್ದೇಶಕಿ ಸಿಂಚನ ಎನ್.ಬಿ.ಸ್ವಾಗತಿಸಿದರು. ಉದ್ಘಾಟನಾ ಸಮಾರಂಭ ಸುಭ ಸಂದರ್ಭದಲ್ಲಿ ಗ್ರಾಹಕರಿಗೆ ಸುಜುಕಿ ಸ್ಕೂಟರ್ ಗಳನ್ನು ಸಮಾರಂಭದಲ್ಲಿ ಭಾಗವಹಿಸಿದ್ದ ಅತಿಥಿಗಳು ಹಸ್ತಾಂತರಿಸಿದರು. ಸುಳ್ಯ ನಗರ ಪಂಚಾಯತ್ ಸದಸ್ಯ ಬುದ್ದನಾಯ್ಕ,ಉಡುಪಿ ಗಾರ್ಡನ್ ಮಾಲಕ ಶಂಕರ್, ಜನಾರ್ದನ ನಾಯ್ಕ,ವೆಂಕಟರಮಣ ಗೌಡ, ಗ್ರ್ಯಾಂಡ್ ಪರಿವಾರ್ ನ ಎಂ.ಕೆ ಲತೀಫ್, ಸಾದೀಕ್ ಪೆರಾಜೆ,ರಾಜೇಶ್, ಹನೀಫ್,ರಂಜನ್ ,ಶ್ವೇತಾ ಇವರಿಗೆ ಕೀಯನ್ನು ಹಸ್ತಾಂತರಿಸಿದರು.