Ad Widget

ಅಕ್ಟೋಬರ್ 18 ಗಾಂಧಿನಗರ ಎಸ್ಸೆಸ್ಸೆಫ್ ವತಿಯಿಂದ ಬ್ಲಡ್ ಸೈಬೋ 199ನೇ ರಕ್ತದಾನ ಶಿಬಿರ

ಎಸ್ ಎಸ್ ಎಫ್ ಬ್ಲಡ್ ಸೈಬೋ 199 ನೇ ರಕ್ತದಾನ ಶಿಬಿರ ಅ.18 ರಂದು ಸುಳ್ಯ ಗಾಂಧಿನಗರದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ ಎಂದು ಸಂಘಟಕರು ಇಂದು ಸುಳ್ಯ ಪ್ರೆಸ್ ಕ್ಲಬ್ಬಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಎಸ್ಎಸ್ಎಫ್ ಸಂಘಟನೆಯ ಬ್ಲಡ್ ಸೈಬೋ ವಿಭಾಗವು ರಾಷ್ಟ್ರ ಮತ್ತು ರಾಜ್ಯದ ಮೂಲೆಮೂಲೆಗಳಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗುತ್ತಿದ್ದು ಸಾವಿರಾರು ಜೀವಗಳನ್ನು ರಕ್ಷಿಸುವಲ್ಲಿ ಯಶಸ್ವಿ ಪಾತ್ರ ವಹಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ 197 ಕ್ಯಾಂಪು ಗಳನ್ನು ಆಯೋಜಿಸಿ ಸುಮಾರು 16 ಸಾವಿರ ಯುನಿಟ್ ರಕ್ತಗಳನ್ನು ಜಿಲ್ಲೆಯ ವಿವಿಧ ಆಸ್ಪತ್ರೆಗಳ ಬ್ಲಡ್ ಬ್ಯಾಂಕ್ ಮುಖಾಂತರ ರೋಗಿಗಳಿಗೆ ನೀಡಿ ಸಹಾಯ ಮಾಡಲಾಗಿದೆ. 198 ನೇ ಕ್ಯಾಂಪ್ ಜೋಕಟ್ಟೆಯಲ್ಲಿ 199ನೇ ಕ್ಯಾಂಪ್ ಸುಳ್ಯದಲ್ಲಿ ಅದೇ ರೀತಿ 200ನೇ ಐತಿಹಾಸಿಕ ಕ್ಯಾಂಪ್ ನವಂಬರ್ 13 ರಂದು ಮಿತ್ತೂರು ಕೆ ಜಿ ಎನ್ ವಿದ್ಯಾಸಂಸ್ಥೆಯಲ್ಲಿ ನಡೆಯುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಅ. 18ರಂದು ಸುಳ್ಯ ಗಾಂಧಿನಗರದ ಎಸ್ಎಸ್ಎಫ್ ಬ್ಲಡ್ ಸೈಬೋ 199ನೇ ರಕ್ತದಾನ ಶಿಬಿರ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಹಾಗೂ ಲೇಡಿಗೋಷನ್ ಆಸ್ಪತ್ರೆಯ ಸಹಕಾರದೊಂದಿಗೆ ಬೆಳಿಗ್ಗೆ 9:00 ಗಂಟೆಯಿಂದ ಮಧ್ಯಾಹ್ನ12:00 ತನಕ ನಡೆಯಲಿದೆ ಎಂದು ಹೇಳಿದರು . ಈ ಕ್ಯಾಂಪಿನಲ್ಲಿ ಸಾಮಾಜಿಕ ಧಾರ್ಮಿಕ ರಾಜಕೀಯ ನಾಯಕರುಗಳು ಭಾಗವಹಿಸಲಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎಸ್ಎಸ್ಎಫ್ ಬ್ಲಡ್ ಸೈಬೋ ನೇತೃತ್ವದಲ್ಲಿ ರಕ್ತದಾನ ಶಿಬಿರಗಳು ನಡೆಯುತ್ತಿದ್ದು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಗೆ ರಕ್ತದ ಪೂರೈಕೆ ಮಾಡಿದ ವಿವಿಧ ಸಂಘಟನೆಗಳ ಪೈಕಿ ಎಸ್ಎಸ್ಎಫ್ ಸಂಘಟನೆಯು 2128 ಯೂನಿಟ್ ರಕ್ತದಾನ ಮಾಡಿ ಪ್ರಥಮ ಸ್ಥಾನಿಯಾಗಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸುಳ್ಯ ಸೆಪ್ಟರ್ ಎಸ್ಎಸ್ಎಫ್ ಸಮಿತಿಯ ಅಧ್ಯಕ್ಷ ಸ್ವಭಾಹ್ ಇಮಮಿ, ಸ್ವಾಗತ ಸಮಿತಿ ಚೇರ್ಮನ್ ಸಿದ್ದೀಕ್ ಕಟ್ಟೇ ಕಾರ್ಸ್, ಕನ್ವೀನರ್ ಸಿದ್ದಿಕ್ ಗೂನಡ್ಕ, ಕೋಶಾಧಿಕಾರಿ ಕಬೀರ್ ಜಟ್ಟಿಪಳ್ಳ, ಸೆಕ್ಟರ್ ಕಾರ್ಯದರ್ಶಿ ಸಿದ್ದೀಕ್ ಎಲಿಮಲೆ, ಸ್ವಾಗತ ಸಮಿತಿ ವಾಯ್ಸ್ ಚೇರ್ಮನ್ ನೌಶಾದ್ ಕೆರೆಮೂಲೆ ಹಾಗೂ ಸಮೀರ್ ಡಿಎಚ್ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading