Ad Widget

ಎಸ್ ಎಂ ಎ ಝೋನಲ್ ಲೆವೆಲ್ ಅಲರ್ಟ್ 2020 ಮತ್ತು ಬೇಕಲ್ ಉಸ್ತಾದ್ ಅನುಸ್ಮರಣಾ ಕಾರ್ಯಕ್ರಮ

ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಎಸ್ಎಂಎ ಬೆಳ್ಳಾರೆ ಝೋನಲ್ ಸಮಿತಿ ವತಿಯಿಂದ ಎಸ್ಎಂಎ ಲೀಡರ್ಸ್ ಮೀಟ್ ಹಾಗೂ ಇತ್ತೀಚೆಗೆ ನಿಧನರಾದ ತಾಜಲ್ ಫುಖಹ ಬೇಕಲ್ ಉಸ್ತಾದರ ಅನುಸ್ಮರಣಾ ಕಾರ್ಯಕ್ರಮ ಬೆಳ್ಳಾರೆ ಸುನ್ನೀ ಸೆಂಟರ್ ಸಭಾಂಗಣದಲ್ಲಿ ಬೆಳ್ಳಾರೆ ಝೋನಲ್ ಸಮಿತಿ ಅಧ್ಯಕ್ಷ ಹಾಜಿ ಇಸ್ಮಾಯಿಲ್ ಪಡ್ಪಿನಂಗಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

. . . . . . . . .

ಲೀಡರ್ಸ್ ಮೀಟ್ ಸಭಾಕಾರ್ಯಕ್ರಮವನ್ನು ಎಸ್ಎಂಎ ಜಿಲ್ಲಾ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಕೊಡುಂಗೈ ಉದ್ಘಾಟಿಸಿ ಎಸ್ಎಂಎ ಅಲರ್ಟ್ ಕಾರ್ಯಕ್ರಮದ ದಿಕ್ಸೂಚಿ ಭಾಷಣವನ್ನು ಮಾಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಎಸ್ಎಂಎ ನಾಯಕರಾದ ಮಹಮ್ಮದ್ ಕುಂಞಿ ಗೂನಡ್ಕ, ಹಾಜಿ ಮುಸ್ತಫಾ ಜನತಾ, ಹಸನ್ ಸಖಾಫಿ ಬೆಳ್ಳಾರೆ, ಸಂಘಟನೆಯ ಕುರಿತು ಮಾತನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ನಂತರ ನಡೆದ ಬೇಕಲ್ ಉಸ್ತಾದ್ ರವರ ಅನುಷ್ಮರಣಾ ಕಾರ್ಯಕ್ರಮದ ಅಂಗವಾಗಿ ಮೂಡಡ್ಕ ಮದೀನತುಲ್ ಮುನವ್ವರ ದರಸ್ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಅಲ್ಲ ಹಾಜ್ ಸಲಾವುದ್ದೀನ್ ಸಖಾಫಿ ಮಾಡನ್ನೂರು ರವರು ಬೇಕಲ್ ಉಸ್ತಾದ್ ರವರ ಜೀವನಚರಿತ್ರೆಯ ಕೆಲವು ಮುಖ್ಯ ಘಟನಾವಳಿಗಳ ಕುರಿತು ಅನುಸ್ಮರಣಾ ಭಾಷಣವನ್ನು ಮಾಡಿದರು. ಈ ವೇಳೆ ತಹಲೀಲ್ ಸಮರ್ಪಣೆ ಹಾಗೂ ದುವಾ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಎಸ್ ಎಂ ಎ ಜಿಲ್ಲಾ ಸಮಿತಿ ನಿರ್ದೇಶಕ ಹಾಜಿ ಅಬ್ದುಲ್ ಲತೀಫ್ ಸಖಾಫಿ ಮಾಡನ್ನೂರು, ಸಮಿತಿ ಉಪಾಧ್ಯಕ್ಷ ಅಬ್ದುಲ್ ಹಮೀದ್ ಅಲ್ಫಾ, ಸುಳ್ಯ, ಬೈತಡ್ಡ, ಕಡಬರೀಜನಲ್ಅದ್ಯಕ್ಷರು, ಉಪಸ್ಥಿತರಿದ್ದರು.ಝೋನಲ್ ಸಮಿತಿ ಪದಾಧಿಕಾರಿಗಳು,ಝೋನಲ್ ನಿರ್ದೇಶಕರು
ರೀಜನಲ್ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು.ಬೆಳ್ಳಾರೆ ಝೋನಲ್ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಅಹಸನಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಜಿಲ್ಲಾ ಸಮಿತಿ ಸದಸ್ಯ ಹಸೈನಾರ್ ಜಯನಗರ ವಂದಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading