
ನಿನ್ನೆ ರಾತ್ರಿ ಸುರಿದ ಬಾರೀ ಮಳೆಗೆ ಸಂಪಾಜೆಯ ಗಡಿಕಲ್ಲಿನ ಮಸೀದಿಯ ಬಳಿ ಮಂಗಳೂರು ಮೈಸೂರ್ ರಾಜ್ಯ ಹೆದ್ದಾರಿಯ ಚರಂಡಿ ಕುಸಿದು ಅಪಾಯಕಾರಿ ಹೊಂಡ ನಿರ್ಮಾಣವಾಗಿದೆ. ದಿನಂಪ್ರತಿ ನೂರಾರು ವಾಹನಗಳು, ಪಾದಚಾರಿಗಳು ಇಲ್ಲಿ ಸಂಚರಿಸುತ್ತಿದ್ದು ಅಪಾಯದ ಮುನ್ಸೂಚನೆ ನೀಡಿದೆ. ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಮುಂದೆ ಆಗಬಹುದಾದ ದುರ್ಘಟನೆಗಳನ್ನು ತಪ್ಪಿಸಬೇಕೆಂದು ಮಹಮ್ಮದ್ ಕುಂಞಿ
ಎಸ್ ಡಿ ಪಿ ಐ ಅಧ್ಯಕ್ಷರು ಸಂಪಾಜೆ ವಲಯ ,ಅಶ್ರಫ್ ವಲಯ ಉಸ್ತುವಾರಿ ಗಳು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿ ಮಾಡಿಕೊಂಡರು.