ಕೊಲ್ಲಮೊಗ್ರ ಪೇಟೆಯ ಸಮೀಪ ಇರುವ ಕಿರು ಸೇತುವೆ ನಿನ್ನೆ ದಿನ ಭಾರಿ ಮಳೆಯಿಂದ ಸೇತುವೆಗೆ ಹಾನಿಯಾಗಿದ್ದು ರಸ್ತೆಯ ಸಮೀಪ ಇದ್ದ ಮರ ಉರುಳಿ ಬಿದ್ದಿದೆ.
ರಸ್ತೆಯ ಸಮೀಪ ದೊಡ್ಡ ದೊಡ್ಡ ಅಪಾಯಕಾರಿ ಗುಂಡಿಗಳು ನಿರ್ಮಾಣವಾಗಿದೆ. ನಿನ್ನೆ ಸುರಿದ ಭಾರಿ ಮಳೆಗೆ ನಾಲ್ಕುಗಂಟೆಗಳ ಕಾಲ ರಸ್ತೆ ಸಂಪೂರ್ಣ ಬಂದ್ ಆಗಿ ಸಾರ್ವಜನಿಕರು ಪರದಾಡಿದ್ದರು. ರಾತ್ರಿ ಸಮಯದಲ್ಲಿ ಸೇತುವೆ ಸಮೀಪವಿರುವ ಎರಡು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಎರಡು ಮನೆಯವರನ್ನು ಯುವಕರ ತಂಡ ತಕ್ಷಣ ಬೇರೆ ಕಡೆಗಳಿಗೆ ಸ್ಥಳಂತರಿಸಿದ್ದಾರೆ. ಸೇತುವೆ ಮೇಲೆ ನೀರು ಹರಿಯುತ್ತಿದ್ದಂತೆ ಕಾರ್ಯ ಪ್ರವೃತ್ತರಾದ ಯುವಕರ ತಂಡ ಮುನ್ನಚ್ಚೆರಿಕೆ ಕ್ರಮವನ್ನು ಕೈಗೊಂಡರು. ಇನ್ನದರೂ ಇಲಾಖೆ ಸ್ಪಂದಿಸದೇ ಇದ್ದರೇ ಅಪಾಯ ತಪ್ಪಿದ್ದಲ್ಲ ಎಂದಿದ್ದಾರೆ ಗ್ರಾಮಸ್ಥರು.