ಎಡಮಂಗಲ ಗ್ರಾಮದ ಕೋಡಿಮಜಲು ಜಾನಕಿ ಬಂಗೇರರು ಅ. 8 ರಂದು ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು. ಸುಮಾರು 45 ವರ್ಷಗಳ ಕಾಲ ಕಾಂಗ್ರೆಸ್ ಕಾರ್ಯಕರ್ತೆಯಾಗಿ ದುಡಿದಿರುವುದಲ್ಲದೆ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷರಾಗಿ, ಎಡಮಂಗಲ ಗ್ರಾ.ಪಂ. ಸದಸ್ಯರಾಗಿ, ಎಡಮಂಗಲ ಪ್ರಾ.ಕೃ.ಪ.ಸ.ಸಂಘದಲ್ಲಿ ಮೂರು ಅವಧಿಗೆ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಎಡಮಂಗಲ ಮಹಿಳಾ ಮಂಡಲದ ಅಧ್ಯಕ್ಷೆಯಾಗಿ, ಆರಾಧನಾ ಸಮಿತಿ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮೃತರು ಪುತ್ರಿ ಉಪನ್ಯಾಸಕಿಯಾಗಿರುವ ಶ್ರೀಮತಿ ವಿಸ್ಮಿತಾ ಬಂಗೇರ ಮಾಣಿ, ಅಳಿಯ ಮಧುಕರ್ ಮುಳಿಬೈಲು, ಮೊಮ್ಮಕ್ಕಳಾದ ವೆಹಾನ್ ಎಂ ಬಿಲ್ಲವ ಹಾಗೂ ಗಹನ್ ಎಂ ಬಿಲ್ಲವ, ಸಹೋದರರಾದ ಎನ್.ಎಂ.ಪಿ.ಟಿ. ಉದ್ಯೋಗಿಯಾಗಿರುವ ಜನಾರ್ದನ ಬಂಗೇರ ಮೂಲ್ಕಿ, ಮಂಗಳೂರಿನಲ್ಲಿ ಉದ್ಯಮಿಯಾಗಿರುವ ಚಂದ್ರಶೇಖರ ಬಂಗೇರ, ಸಹೋದರಿಯರಾದ ಶ್ರೀಮತಿ ಸುನಂದ ಬಂಗೇರ ಸುರತ್ಕಲ್, ಶ್ರೀಮತಿ ಮೋಹಿನಿ ಬಂಗೇರ ವಿಟ್ಲ ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
- Tuesday
- December 3rd, 2024