ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಹಾಗೂ ಫ್ರೆಂಡ್ಸ್ ಸರ್ಕಲ್ ಗಾಂಧಿನಗರ ಇದರ ಜಂಟಿ ಆಶ್ರಯದಲ್ಲಿ ಅಕ್ಟೋಬರ್ 10ರಂದು ಸುಳ್ಯದ ಗಾಂಧಿನಗರ ಆನ್ಸರ್ ಕಾಂಪ್ಲೆಕ್ಸ್ ನಲ್ಲಿ ಮಂಗಳೂರು ಕೆಎಸ್ ಹೆಗಡೆ ಮೆಡಿಕಲ್ ಅಕಾಡೆಮಿ ಇವರ ಸಹಭಾಗಿತ್ವದಲ್ಲಿ ಪ್ಲಾಸ್ಮ ದಾನಿಗಳ ರಕ್ತದ ಮಾದರಿ ಸಂಗ್ರಹ ಶಿಬಿರ ನಡೆಯಲಿದೆ ಎಂದು ಸಂಘಟಕರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಈ ಶಿಬಿರ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆಯ ತನಕ ನಡೆಯಲಿದೆ . ಕೋವಿಡ್ 19 ರ ಸಂಕಷ್ಟದ ಸಮಯದಲ್ಲಿ ಕೊರೋನಾ ಬಾಧಿತ ರೋಗಿಗಳ ಜೀವ ಉಳಿಸುವ ಪ್ರಯತ್ನದ ಸಲುವಾಗಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
- Thursday
- November 21st, 2024